ಮುಂಬೈ(ಮಹಾರಾಷ್ಟ್ರ):ಪಾಕಿಸ್ತಾನ ಮತ್ತು ಭಾರತ ಮಧ್ಯೆ ಎಣ್ಣೆ ಸೀಗೆಕಾಯಿ ಸಂಬಂಧವೇ. ಆದರೆ, ಜನರ ನಡುವೆ ಪ್ರೀತಿಗೇನು ಕಮ್ಮಿಯಿಲ್ಲ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕ್ನ ಶೋಯೆಬ್ ಮಲಿಕ್ ಜೊತೆ ಪ್ರೇಮ ವಿವಾಹವಾಗಿದ್ದರು. ಈಗ ಇಬ್ಬರ ಸಂಬಂಧ ಹಳಸಿದೆ ಎಂಬ ಗಾಳಿ ಸುದ್ದಿ ಮಧ್ಯೆಯೇ ಇನ್ನೊಂದು ಪ್ರೇಮ ಸಂಬಂಧ ಬೆಳಕಿಗೆ ಬಂದಿದೆ.
ಲಂಡನ್ನಲ್ಲಿ ವಾಸವಿರುವ ಎನ್ಆರ್ಐ ಪಾಕ್ ಗೆಳತಿಗಾಗಿ ಭಾರತದಲ್ಲಿರುವ ತನ್ನ ಹೆಂಡತಿಗೆ ವಿಚ್ಚೇದನ ಕೋರಿ ನೋಟಿಸ್ ಕಳುಹಿಸಿದ್ದಾನೆ. ಇದನ್ನು ವಿರೋಧಿಸಿರುವ ಪತ್ನಿಯ ಕುಟುಂಬಸ್ಥರು ನ್ಯಾಯ ದೊರಕಿಸಿಕೊಡುವಂತೆ ಕೋರ್ಟ್ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
ವಿಚ್ಚೇದನಕ್ಕೆ ಕಾರಣವಾದ ಪಾಕಿಸ್ತಾನಿ ಗೆಳತಿ:ಮುಂಬೈ ಮೂಲದ ರಾಜ್ಕುಮಾರ್ ಬಾಬುಲಾಲ್ ಜೈನ್ ವಿಚ್ಚೇದನ ನೀಡಲು ಮುಂದಾದವರು. 15 ವರ್ಷಗಳ ಹಿಂದೆ ಮಹಾರಾಷ್ಟ್ರದ ಮಲದ್ನ ಶ್ವೇತಾ ಎಂಬುವವರ ಜೊತೆ ವಿವಾಹವಾಗಿದ್ದರು. ಬಳಿಕ ಲಂಡನ್ಗೆ ವರ್ಗವಾದರು. ರಾಜ್ಕುಮಾರ್ ಆಯುರ್ವೇದ ಔಷಧ ಅಂಗಡಿ ನಡೆಸಿದರೆ, ಶ್ವೇತಾ ಅವರು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.