ಪುಣೆ: ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಎಲ್ಲರಿಗೂ ಸಲಹೆ ನೀಡುತ್ತಾರೆ. ಆದರೆ ಧೂಮಪಾನ ಚಟಕ್ಕೆ ಅಂಟಿಕೊಂಡಿರುವ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುಣೆ ಮೂಲದ ಅನಂತವೇದ ಆಯುರ್ವೇದ ಸಂಶೋಧನಾ ಸಂಸ್ಥೆಯೊಂದು ಹೊಸ ರೀತಿಯ ಪ್ರಯೋಗ ನಡೆಸಿ ಆಯುರ್ವೇದ ಸಿಗರೇಟ್ಅನ್ನು ಅಭಿವೃದ್ಧಿಪಡಿಸಿದೆ.
ಸಂಶೋಧಕ ಡಾ.ರಾಜಸ್ ನಿಟ್ಸೂರ್ ಅವರು ಸಂಶೋಧನೆ ನಡೆಸಿ ಈ ಆಯುರ್ವೇದಿಕ್ ಸಿಗರೇಟ್ ಅನ್ನು ಅಭಿವೃದ್ಧಿಪಡಿಸಿದ್ದು, ಪೇಟೆಂಟ್ ಪಡೆದುಕೊಂಡಿದೆ. ಹಾಗಾಗಿ, ಧೂಮಪಾನದ ಚಟ ಇರುವವರಿಗೆ ಈ ಸಿಗರೇಟ್ ವರದಾನವಾಗಲಿದೆ ಎನ್ನುತ್ತಾರೆ ರಾಜಸ್.
ವೈದ್ಯ ಅನಂತ್ ನಿಟ್ಸೂರ್ ಮತ್ತು ಅವರ ಮಗ ವೈದ್ಯ ಉದಯ್ ನಿಟ್ಸೂರ್ ಸುಮಾರು ಹತ್ತು ವರ್ಷಗಳ ಹಿಂದೆಯೇ ಈ ಸಿಗರೇಟ್ ಸಂಶೋಧನೆ ಆರಂಭಿಸಿ, ಅಭಿವೃದ್ಧಿಪಡಿಸಿದ್ದರು. ಸದ್ಯಕ್ಕೆ ಡಾ.ಅನಂತ್ ನಿಟ್ಸೂರ್ ಅವರ ಮೊಮ್ಮಗ ರಾಜಾಸ್ ನಿಟ್ಸೂರ್ ಅವರು ಪೇಟೆಂಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.