ಕರ್ನಾಟಕ

karnataka

ETV Bharat / bharat

ಲೈವ್​ ಸ್ಟ್ರೀಮ್​ ಜೊತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರ ತಂದ ಟೆಲಿಗ್ರಾಮ್​

ಲೈವ್​ ಸ್ಟ್ರೀಮ್​ ಜೊತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಟೆಲಿಗ್ರಾಮ್​ ಕಂಪನಿ ಹೊರ ತಂದಿದೆ. ಈ ಮೂಲಕ ಟೆಲಿಗ್ರಾಮ್ ಹೊಸ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ.

live stream with other apps on Telegram, Telegram new update, live stream in Telegram, Telegram news, ಟೆಲಿಗ್ರಾಮ್​ನಲ್ಲಿ ಲೈವ್​ ಸ್ಟ್ರೀಮ್​ನೊಂದಿಗೆ ಇತರ ಆ್ಯಪ್​ ಪರಿಚಯ, ಟೆಲಿಗ್ರಾಂ ನ್ಯೂ ಅಪ್​ಡೇಟ್​, ಟೆಲಿಗ್ರಾಮ್​ನಲ್ಲಿ ನೇರ ಪ್ರಸಾರ, ಟೆಲಿಗ್ರಾಮ್​ ಸುದ್ದಿ,
ಟೆಲಿಗ್ರಾಮ್​

By

Published : Mar 14, 2022, 9:28 AM IST

Updated : Mar 14, 2022, 10:40 AM IST

ನವದೆಹಲಿ :ಟೆಲಿಗ್ರಾಮ್ ಮೆಸೆಂಜರ್ ಇತರ ಅಪ್ಲಿಕೇಶನ್‌ಗಳೊಂದಿಗೆ ಲೈವ್ ಸ್ಟ್ರೀಮಿಂಗ್ ಸೇರಿದಂತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರತಂದಿದೆ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಗ್ರೂಪ್ಸ್​ ಮತ್ತು ಚಾನೆಲ್‌ಗಳಲ್ಲಿ ಅನಿಯಮಿತ ವೀಕ್ಷಕರೊಂದಿಗೆ ಲೈವ್ ವಿಡಿಯೋ ಪ್ರಸಾರದ ಸಾಮರ್ಥ್ಯವನ್ನು ಟೆಲಿಗ್ರಾಮ್ ಹೊಂದಿದೆ.

ಬಳಕೆದಾರರು ಟೆಲಿಗ್ರಾಮ್​ನಲ್ಲಿ ಈಗ OBS ಸ್ಟುಡಿಯೋ ಮತ್ತು XSplit ಬ್ರಾಡ್‌ಕಾಸ್ಟರ್‌ನಂತಹ ಸ್ಟ್ರೀಮಿಂಗ್ ಪರಿಕರಗಳಿಂದ ಪ್ರಸಾರ ಮಾಡಬಹುದಾಗಿದೆ. ಓವರ್‌ಲೇಗಳು ಮತ್ತು ಮಲ್ಟಿ - ಸ್ಕ್ರೀನ್​ ಲೇಔಟ್‌ಗಳನ್ನು ಸುಲಭವಾಗಿ ಸೇರಿಸಬಹುದಾಗಿದೆ. ಇದರಿಂದಾಗಿ ಯಾವುದೇ ಟೆಲಿಗ್ರಾಮ್ ಚಾನಲ್ ಅನ್ನು ವೃತ್ತಿಪರ ಟಿವಿ ಸ್ಟೇಷನ್ ಆಗಿ ಪರಿವರ್ತಿಸಬಹುದಾಗಿದೆ.

ಓದಿ:ಟ್ರಕ್ ​- ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 7 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!

ಈ ಹೊಸ ವೈಶಿಷ್ಟ್ಯವು ತಮ್ಮ ಚಂದಾದಾರರನ್ನು ತಲುಪಲು ಟೆಲಿಗ್ರಾಮ್ ಲೈವ್ ಸ್ಟ್ರೀಮ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವ ವೃತ್ತಿಪರ ಬ್ಲಾಗರ್‌ಗಳು ಮತ್ತು ಪತ್ರಕರ್ತರಿಗೆ ಸಹಾಯಕವಾಗಲಿದೆ ಎಂದು ಕಂಪನಿ ಹೇಳಿದೆ.

ಟೆಲಿಗ್ರಾಮ್ 2020 ರಿಂದ ಪ್ರತಿ 2GB ವರೆಗಿನ ಫೈಲ್‌ಗಳ ಹಂಚಿಕೆಗೆ ಅವಕಾಶವಿದೆ. ಇತ್ತೀಚಿನ ಅಪ್ಡೇಟ್​​​​ನೊಂದಿಗೆ ಫೈಲ್‌ಗಳು ಡೌನ್ಲೋಡ್​ ಆಗುತ್ತಿರುವಾಗ ಸರ್ಚ್​ ಬಾರ್‌ನಲ್ಲಿ ಹೊಸ ಐಕಾನ್ ಗೋಚರಿಸುತ್ತದೆ. ಬಳಕೆದಾರರು ಐಕಾನ್ ಅನ್ನು ಟ್ಯಾಪ್ ಮಾಡಬಹುದು ಅಥವಾ ಅವುಗಳನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಹುಡುಕಾಟದಲ್ಲಿ ಡೌನ್ಲೋಡ್​ ಟ್ಯಾಬ್‌ಗೆ ಹೋಗಬಹುದಾಗಿದೆ.

ಬಹು ಫೋಟೋಗಳನ್ನು ಕಳುಹಿಸುವ ಮೊದಲು ಬಳಕೆದಾರರು ತಮ್ಮ ಆಲ್ಬಮ್ ಅನ್ನು ನಿರ್ವಹಿಸಬಹುದು ಮತ್ತು ಪೂರ್ವ ವೀಕ್ಷಣೆಯನ್ನೂ ಮಾಡಬಹುದಾಗಿದೆ. ಹೊಸ ಅಟ್ಯಾಚ್ಮೆಂಟ್​ ಮೆನು ಬಳಕೆದಾರರಿಗೆ ಆಯ್ಕೆಮಾಡಿದ ಫೋಟೋಗಳನ್ನು ಮರುಹೊಂದಿಸಲು ಅಥವಾ ತೆಗೆದುಹಾಕಲು ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೇ, ನವೀಕರಿಸಿದ ಫೈಲ್‌ಗಳ ಟ್ಯಾಬ್ ಇತ್ತೀಚೆಗೆ ಕಳುಹಿಸಿದ ಫೈಲ್‌ಗಳನ್ನು ತೋರಿಸುತ್ತದೆ ಮತ್ತು ಬಳಕೆದಾರರಿಗೆ ಅವುಗಳನ್ನು ಆಯಾ ಹೆಸರಿನಿಂದ ಹುಡುಕಲು ಅನುಮತಿಸುತ್ತದೆ ಎಂದು ಟೆಲಿಗ್ರಾಮ್ ಹೇಳಿದೆ.

Last Updated : Mar 14, 2022, 10:40 AM IST

ABOUT THE AUTHOR

...view details