ಕರ್ನಾಟಕ

karnataka

By

Published : Jun 14, 2021, 3:16 PM IST

ETV Bharat / bharat

ಗುಜರಾತ್​ನಲ್ಲಿ ಈಗಲೇ ಚುನಾವಣಾ ತಾಲೀಮು ಆರಂಭಿಸಿದ ಕೇಜ್ರಿವಾಲ್​

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ಗೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ 2022ರ ಚುನಾವಣಾ ಸಿದ್ಧತೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.

Kejriwal wrote in Gujarati, "Now Gujarat will change
Kejriwal wrote in Gujarati, "Now Gujarat will change

ಅಹಮದಾಬಾದ್: 2022ರಲ್ಲಿ ಆಮ್​ ಆದ್ಮಿ ಪಾರ್ಟಿ ಗುಜರಾತ್​ನ ಎಲ್ಲ 182 ಸೀಟುಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಪ್​ ಪಾರ್ಟಿ ಈಗಿನಿಂದಲೇ ತಯಾರಿ ನಡೆಸುತ್ತಿದೆ.

ಮುಂದಿನ ವರ್ಷದ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್​​ ಇಂದು ಗುಜರಾತ್​ಗೆ ಭೇಟಿ ನೀಡಿದ್ದಾರೆ. ಅಹಮದಾಬಾದ್​ಗೆ ಆಗಮಿಸಿ ಅವರು ಮಾತನಾಡಿದರು. ಇದಕ್ಕೂ ಮೊದಲು 2022ರ ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ಮಾಹಿತಿ ನೀಡಿದ್ದರು.

ಸೂರತ್​ನಲ್ಲಿ ನಡೆದ ಪುರಸಭಾ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನಗಳನ್ನು ಪಡೆದ ಹಿನ್ನೆಲೆಯಲ್ಲಿ ಆಪ್​ ಪಕ್ಷ ಗುಜರಾತ್‌ನಲ್ಲಿ ತನ್ನ ಪ್ರಭಾವ ಬಲಪಡಿಸುವ ಉದ್ದೇಶವನ್ನು ಹೊಂದಿದೆ.

ಅಷ್ಟೇ ಅಲ್ಲ ಕೇಜ್ರಿವಾಲ್ ಅವರು ಗುಜರಾತಿ ಭಾಷೆಯಲ್ಲಿ ಟ್ವೀಟ್​ ಮಾಡಿ, 'ಈಗ ಗುಜರಾತ್ ಬದಲಾಗುತ್ತದೆ'. ನಾನು ಗುಜರಾತ್‌ಗೆ ಬರುತ್ತಿದ್ದೇನೆ ಮತ್ತು ಗುಜರಾತ್‌ನ ಎಲ್ಲ ಸಹೋದರ - ಸಹೋದರಿಯರನ್ನು ಭೇಟಿಯಾಗುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದರು.

120 ಸದಸ್ಯರ ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ (ಎಸ್‌ಎಂಸಿ) 27 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಗುಜರಾತ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಪಕ್ಷವು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ABOUT THE AUTHOR

...view details