ನವದೆಹಲಿ: 12-18 ವರ್ಷ ವಯಸ್ಸಿನ ಹದಿಹರೆಯದವರಿಗೆ ತನ್ನ ಕೋವಿಡ್ 19 ಲಸಿಕೆಯ ಮೊದಲ ತುರ್ತು ಬಳಕೆಗೆ ನೊವಾವಾಕ್ಸ್ ಅನುಮತಿ ಪಡೆದಿದೆ. ನೊವಾವಾಕ್ಸ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, NVX-CoV2373 ಎಂದೂ ಕರೆಯಲ್ಪಡುವ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಕೊವೊವಾಕ್ಸ್ ಬ್ರಾಂಡ್ ಹೆಸರಿನಡಿ ತಯಾರಿಸಲ್ಪಡುತ್ತದೆ ಮತ್ತು ಮಾರಾಟ ಮಾಡುತ್ತದೆ.
ಇದನ್ನೂ ಓದಿ:ವಾರಾಣಸಿಯಲ್ಲಿ ಬ್ರಹ್ಮಾಸ್ತ್ರ ಚಿತ್ರದ ಅಂತಿಮ ಶೂಟಿಂಗ್; ನವ ದಂಪತಿ ಆಲಿಯಾ - ರಣಬೀರ್ ಫೋಟೋ, ವಿಡಿಯೋ ವೈರಲ್
ಇದು 12-18 ವರ್ಷ ವಯಸ್ಸಿನವರಿಗೆ ಬಳಕೆಗೆ ಅಧಿಕೃತವಾದ ಮೊದಲ ಪ್ರೊಟೀನ್ ಆಧಾರಿತ ಲಸಿಕೆಯಾಗಿದೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ SARS-CoV-2 ನಿಂದ ಉಂಟಾಗುವ ಸೋಂಕನ್ನು ತಡೆಗಟ್ಟಲು ಇದರ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ. ನೊವಾವಾಕ್ಸ್ ಲಸಿಕೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ. ಈಗಾಗಲೇ ಇದರ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ.
ಬಹಳ ದೊಡ್ಡ ಪ್ರಮಾಣದಲ್ಲಿ ನೊವಾವಾಕ್ಸ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದು, ಇದರ ಬಳಕೆಗೆ ಅನುಮತಿ ಸಿಕ್ಕಿದೆ.