ಕರ್ನಾಟಕ

karnataka

ETV Bharat / bharat

ದಲಿತ ಯುವಕನಿಗೆ ಥಳಿತ ಪ್ರಕರಣ; ಯುಪಿ ಸರ್ಕಾರಕ್ಕೆ ಎನ್‌ಸಿಎಸ್‌ಸಿ ನೋಟಿಸ್‌ - ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶದ ಕಾನ್ಪುರ ದೇಹತ್‌ ಜಿಲ್ಲೆಯಲ್ಲಿ ದಲಿತ ಯುವಕನನ್ನು ಥಳಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್‌ಸಿಎಸ್‌ಸಿ) ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

Notice to UP govt over brutal assault on Dalit youth
ದಲಿತ ಯುವಕನಿಗೆ ಥಳಿತ ಪ್ರಕರಣ; ಯುಪಿ ಸರ್ಕಾರಕ್ಕೆ ಎನ್‌ಸಿಎಸ್‌ಸಿ ನೋಟಿಸ್‌

By

Published : Jul 10, 2021, 11:04 PM IST

ನವದೆಹಲಿ: ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿ ಕ್ರೂರವಾಗಿ ನಡೆದುಕೊಂಡಿರುವ ಘಟನೆ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್‌ಸಿಎಸ್‌ಸಿ) ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ. ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಕಾನ್ಪುರ ದೇಹತ್‌ನ ಜಿಲ್ಲಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡಿದೆ.

ಘಟನೆ ಸಂಬಂಧ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆಯೂ ಶೀಘ್ರವೇ ವರದಿ ನೀಡಬೇಕೆಂದು ಆಯೋಗ ಸಚಿಸಿದೆ. ಈ ಕುರಿತು ಮಾತನಾಡಿದ ಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ, ದೇಶದ ಸಂವಿಧಾನದ ಮೂಲಕ ಪರಿಶಿಷ್ಟ ಸಮುದಾಯದ ಜನರಿಗೆ ಹಕ್ಕುಗಳನ್ನು ನೀಡುವುದು ಆಯೋಗದ ಅಧ್ಯಕ್ಷರಾಗಿರುವ ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದಲಿತನೆಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ..! ಯುಪಿಯಲ್ಲಿ ಮೃಗೀಯವಾಗಿ ನಡೆದುಕೊಂಡ ಗುಂಪು

ಆಯೋಗ ನೀಡಿದ ನೋಟಿಸ್‌ ಸಂಬಂಧ ಪಟ್ಟವರು ಕೂಡಲೇ ಪ್ರತಿಕ್ರಿಯೆ ನೀಡದಿದ್ದರೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದಿಂದ ಸಮನ್ಸ್‌ ನೀಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details