ಕರ್ನಾಟಕ

karnataka

ETV Bharat / bharat

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

'ಹನುಮಾನ್ ವಂಚಿತ ಹಾಗೂ ದಲಿತ' ಎಂಬ ಯೋಗಿ ಆದಿತ್ಯನಾಥ್​ ಅವರ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಿಶೋರ್​ ಶರ್ಮಾ ಎಂಬುವರು ನ್ಯಾಯಾಲಯದ ಮೆಟ್ಟಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮೌ ಜಿಲ್ಲಾ ನ್ಯಾಯಾಲಯವು ಯೋಗಿ ಅವರಿಗೆ ನೋಟಿಸ್​ ಜಾರಿ ಮಾಡಿದೆ.

Yogi Adityanath
Yogi Adityanath

By

Published : Mar 23, 2022, 12:19 PM IST

ಮೌ (ಉತ್ತರಪ್ರದೇಶ): ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಮೌ ಜಿಲ್ಲಾ ನ್ಯಾಯಾಲಯ ಜಾರಿ ಮಾಡಿದೆ. 4 ವರ್ಷಗಳ ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಹೇಳಿಕೆ ನೀಡಿರುವ ಆರೋಪದಡಿ ಈ ನೋಟಿಸ್​ ಜಾರಿಗೊಳಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏ.26ಕ್ಕೆ ಕೋರ್ಟ್​ ಮುಂದೂಡಿದೆ.

2018ರ ನವೆಂಬರ್​ 8ರಂದು ರಾಜಸ್ಥಾನದ ಅಲ್ವಾರ ಜಿಲ್ಲೆಯ ಮಳಖೇಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹನುಮಾನ್ ದೇವರ ಕುರಿತಂತೆ ಯೋಗಿ ಆದಿತ್ಯನಾಥ್​ ಮಾತನಾಡಿದ್ದರು. 'ಹನುಮಾನ್ ಅರಣ್ಯವಾಸಿ, ವಂಚಿತ ಮತ್ತು ದಲಿತ ಎಂದು ಯೋಗಿ ಹೇಳಿದ್ದರು. ಅಲ್ಲದೇ, ಬಜರಂಗಬಲಿ ಹನುಮಾನ್​ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಎಲ್ಲ ಭಾರತೀಯ ಸಮುದಾಯಗಳನ್ನು ಒಟ್ಟಿಗೆ ಸೇರಿಸಿದ ಕೆಲಸ ಮಾಡಿದ್ದರು ಅಂತಾ ಅವರು ಹೇಳಿದ್ದರು.

ಯೋಗಿ ಆದಿತ್ಯನಾಥ್​ ಅವರ 'ಹನುಮಾನ್ ವಂಚಿತ ಹಾಗೂ ದಲಿತ' ಎಂಬ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಿಶೋರ್​ ಶರ್ಮಾ ಎಂಬುವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮೌ ಜಿಲ್ಲಾ ನ್ಯಾಯಾಲಯವು ಯೋಗಿ ಅವರಿಗೆ ನೋಟಿಸ್​ ಜಾರಿ ಮಾಡಿದೆ. ಇನ್ನು, ಈ ಮೊದಲು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​​ ಮುಂದೆ ಕಿಶೋರ್​ ಶರ್ಮಾ ದೂರು ದಾಖಲಿಸಿದ್ದರು.

ಆದರೆ, ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ವಜಾಗೊಳಿಸಿದ್ದರು. ಹೀಗಾಗಿ ತಮ್ಮ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಕಿಶೋರ್​ ಶರ್ಮಾ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಜಿಲ್ಲಾ ನ್ಯಾಯಾಲಯವು ಯೋಗಿ ಆದಿತ್ಯನಾಥ್​ ಅವರಿಗೆ ನೋಟಿಸ್​ ಜಾರಿ ಮಾಡಿದೆ.

ಇದನ್ನೂ ಓದಿ:ಮಕ್ಕಳ ಬಾಳಲ್ಲಿ ಕಹಿ ಮೂಡಿಸಿದ ಸಿಹಿ.. ಮಿಠಾಯಿ ತಿಂದು ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ನಾಲ್ಕು ಕಂದಮ್ಮಗಳ ಸಾವು!

ABOUT THE AUTHOR

...view details