ಕರ್ನಾಟಕ

karnataka

By

Published : Jun 20, 2021, 9:21 AM IST

ETV Bharat / bharat

ನೇರವಾಗಿ ಹಾಜರಾಗಿ ವಿವರಣೆ ನೀಡುವಂತೆ ಸಂಸದೀಯ ಸಮಿತಿಯಿಂದ FB​​ಗೆ ಸೂಚನೆ ಸಾಧ್ಯತೆ

ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ನೇರವಾಗಿ ಹಾಜರಾಗುವಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಫೇಸ್​ಬುಕ್ ಅಧಿಕಾರಿಗಳಿಗೆ ಸೂಚಿಸುವ ಸಾಧ್ಯತೆಯಿದೆ.

Direction to Facebook
ಫೇಸ್​ಬುಕ್​ಗೆ ಸೂಚನೆ

ನವದೆಹಲಿ:ನಾಗರಿಕರ ಹಕ್ಕುಗಳನ್ನು ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗ ತಡೆಯುವ ಕಂಪನಿಯ ನೀತಿಗಳನ್ನು ಪರಿಶೀಲಿಸುವ ಸಲುವಾಗಿ ನೇಮಕ ಮಾಡಲಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ, ನೇರವಾಗಿ ತಮ್ಮ ಮುಂದೆ ಹಾಜರಾಗುವಂತೆ ಫೇಸ್‌ಬುಕ್ ಅಧಿಕಾರಿಗಳಿಗೆ ನಿರ್ದೇಶಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಾಮಾಜಿಕ ಮಾಧ್ಯಮಗಳ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸದಿರುವುದಕ್ಕೆ ಸಂಸದೀಯ ಸಮಿತಿಯು ಶುಕ್ರವಾರ ಟ್ವಿಟ್ಟರ್​​ ಅಧಿಕಾರಿಗಳನ್ನು ಸುಮಾರು 90 ನಿಮಿಷಗಳ ಕಾಲ ವಿಚಾರಣೆ ನಡೆಸಿದೆ. ಇದೇ ರೀತಿ ಯೂಟ್ಯೂಬ್, ಗೂಗಲ್ ಮತ್ತು ಇತರ ದೈತ್ಯ ಕಂಪನಿಗಳ ಅಧಿಕಾರಿಗಳನ್ನು ನೇರವಾಗಿ ಸಮಿತಿ ಮುಂದೆ ಹಾಜರಾಗುವಂತೆ ತಿಳಿಸುವ ಸಾಧ್ಯತೆಯೂ ದಟ್ಟವಾಗಿದೆ.

ಕಂಪನಿಯ ಆ್ಯಂಟಿ ಕೋವಿಡ್ ನಿಯಮದ ಪ್ರಕಾರ, ನೇರವಾಗಿ (ವೈಯುಕ್ತಿವಾಗಿ ) ಸಮಿತಿ ಮುಂದೆ ಹಾಜರಾಗಲು ಫೇಸ್​ಬುಕ್ ಅಧಿಕಾರಿಗಳು ನಿರಾಕರಿಸಬಹುದು. ಆದರೂ, ಶಶಿ ತರೂರ್ ನೇತೃತ್ವದ ಅತ್ಯಂತ ಉನ್ನತ ಮಟ್ಟದ ಸಮಿತಿಯು ವರ್ಚುವಲ್ ಸಭೆ ನಡೆಸುವುದು ಸಂಸದೀಯ ನಿಯಮಗಳಿಗೆ ವಿರುದ್ದವಾಗಿದೆ ಎಂದು ಹೇಳಿ ನೇರವಾಗಿ ಹಾಜರಾಗಲು ಸೂಚಿಸಬಹುದು.

ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಒಟ್ಟು 7 ಸಂಸದರು ವಿಶೇಷ ಸಂಸದೀಯ ಸಮಿತಿಯಲ್ಲಿ ಇದ್ದಾರೆ. ಈ ಸಮಿತಿಯು ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಟ್ವಿಟ್ಟರ್​ಗೆ ಸೂಚಿಸಿದೆ. ಹೊಸ ಐಟಿ ನಿಯಮದಂತೆ ಯಾಕೆ ಪೂರ್ಣಾವಧಿಯ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿಲ್ಲ ಎಂದು ಸಮಿತಿ ಟ್ವಿಟ್ಟರ್​ ಅನ್ನು ಪ್ರಶ್ನಿಸಿದೆ. ಸಮಿತಿಯ ಪ್ರಶ್ನೆಗಳಿಗೆ ಟ್ಟಿಟ್ಟರ್​ ಅಸ್ಪಷ್ಟವಾಗಿ ಉತ್ತರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಮ್ಮ ಪಾರದರ್ಶಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌಪ್ಯತೆ ತತ್ವಗಳಿಗೆ ಅನುಗುಣವಾಗಿ ನಾಗರಿಕರ ಹಕ್ಕುಗಳನ್ನು ಕಾಪಾಡುವ ಕುರಿತು ಸಂಸದೀಯ ಸಮಿತಿಯೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಬಿಜೆಪಿ ನಾಯಕ ಸಂಬೀತ್ ಪಾತ್ರಾ ಅವರ ಟ್ವೀಟ್ ಅನ್ನು ಕಾಂಗ್ರೆಸ್ "ಟೂಲ್​ಕಿಟ್​" ಎಂದು ಉಲ್ಲೇಖಿಸಿ ಟ್ವಿಟ್ಟರ್​​ ಫ್ಲ್ಯಾಗ್ ಮಾಡಿತ್ತು. ಇದಾದ ಬಳಿಕ ಟ್ವಿಟ್ಟರ್​ ವಿರುದ್ಧ ಕೇಂದ್ರ ಸರ್ಕಾರ ತಿರುಗಿ ಬಿದ್ದಿದೆ. ಸರ್ಕಾರ ಮತ್ತು ಟ್ವಿಟ್ಟರ್​ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ.

ಸಂಬೀತ್ ಪಾತ್ರ ಟ್ವೀಟ್​ಗೆ ಫ್ಲ್ಯಾಗ್ ಮಾಡಿರುವುದನ್ನು ತೆಗೆದು ಹಾಕುವಂತೆ ಟ್ವಿಟ್ಟರ್​ಗೆ ಸರ್ಕಾರ ಸೂಚಿಸಿತ್ತು. ಬಳಿಕ ದೆಹಲಿ ಪೊಲೀಸರು ಟ್ವಿಟ್ಟರ್​ಗೆ ನೋಟಿಸ್​ ನೀಡಿದ್ದರು ಮತ್ತು ಟ್ವಿಟ್ಟರ್​ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರನ್ನು ವಿಚಾರಣೆ ನಡೆಸಲು ಬೆಂಗಳೂರಿಗೆ ಬಂದಿತ್ತು. ಸದ್ಯ, ಹೊಸ ಐಟಿ ನಿಯಮಗಳನ್ನು ಮುಂದಿಟ್ಟುಕೊಂಡು ಸರ್ಕಾರ ಟ್ವಿಟ್ಟರ್​ಗೆ ಟಾಂಗ್ ಕೊಡುತ್ತಿದೆ.

ಇದನ್ನೂಓದಿ : Twitter ಇಂಡಿಯಾ ಪ್ರತಿನಿಧಿಗಳ ಜೊತೆ ಸಂಸದೀಯ ಸ್ಥಾಯಿ ಸಮಿತಿ ಸಭೆ

ABOUT THE AUTHOR

...view details