ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಉತ್ತುಂಗದಲ್ಲಿದ್ದಾಗ ಜನರಿಗೆ ಔಷಧ ಮತ್ತು ಆಮ್ಲಜನಕ ನೀಡಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ದೆಹಲಿ ಪೊಲೀಸರಿಂದ ವಿಚಾರಣೆಗೊಳಗಾಗಿದ್ದು, ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ದೆಹಲಿ ಪೊಲೀಸರು ಬಿ.ವಿ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ, ಕೋವಿಡ್ ಸಮಯದಲ್ಲಿ ಜನರಿಗೆ ಔಷಧಿಗಳನ್ನು ಮತ್ತು ಪರಿಹಾರಗಳನ್ನು ಒದಗಿಸಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳಲು ಪೊಲೀಸರು ಪ್ರಶ್ನಿಸಿದ್ದರು. ಜನರ ಪ್ರಾಣವನ್ನು ಉಳಿಸಲು ಸಹಾಯ ಮಾಡುತ್ತಿದ್ದೇನೆ. ಐವೈಸಿ (ಇಂಡಿಯನ್ ಯೂತ್ ಕಾಂಗ್ರೆಸ್) ನಲ್ಲಿ ನೂರಾರು ಸ್ವಯಂಸೇವಕರ ತಂಡವನ್ನು ನಾವು ಹೊಂದಿದ್ದೇವೆ. ವಸ್ತುಗಳನ್ನು ಜೋಡಿಸಲು ಮತ್ತು ಅದನ್ನು ಜನರಿಗೆ ತಲುಪಿಸಲು ಸಹಾಯಕರಾಗಿದ್ದಾರೆ ಎಂದಿದ್ದಾರೆ.
ಓದಿ: ಕೋವಿಡ್ ಸೋಂಕಿತರಿಗೆ ನೆರವು: ಪೊಲೀಸರಿಂದ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ನ ಪ್ರಶ್ನೆ
ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಪೊಲೀಸರಿಗಾಗಲಿ ಅಥವಾ ಯಾವುದೇ ಪಿಐಎಲ್‌ಗೆ ಆಗಲಿ ನಾವು ಹೆದರುವುದಿಲ್ಲ. ತಮ್ಮ ಕುಟುಂಬಗಳನ್ನು ಮಾರಣಾಂತಿಕ ವೈರಸ್‌ನಿಂದ ರಕ್ಷಿಸಲು ತೀವ್ರವಾಗಿ ಪ್ರಯತ್ನಿಸುತ್ತಿರುವ ಜನರಿಗೆ ನಾವು ಸಹಾಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಐವೈಸಿ ಅಧ್ಯಕ್ಷ ಹೇಳಿದರು.