ಕೋಟಾ(ರಾಜಸ್ಥಾನ):ಭಾರತೀಯ ಮೇಲ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪಾಕಿಸ್ತಾನದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ವೇಳೆ ಸರ್ಕಾರ ತನ್ನ ಕುಟುಂಬಕ್ಕೆ ವೇತನ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ರಾಜಸ್ಥಾನದ ವ್ಯಕ್ತಿಗೆ ಸುಪ್ರೀಂಕೋರ್ಟ್ 10 ಲಕ್ಷ ಪರಿಹಾರ ನೀಡಲು ಸೂಚಿಸಿದೆ.
ಪ್ರಕರಣವೇನು:ತಾನು ಭಾರತೀಯ ಮೇಲ್ ಸೇವೆಯ ಸಿಬ್ಬಂದಿಯಾಗಿದ್ದರೂ ಪಾಕಿಸ್ತಾನದಲ್ಲಿ ಭಾರತದ ಪರ ಗೂಢಾಚಾರಿಕೆ ನಡೆಸುತ್ತಿದ್ದೆ. ಈ ವೇಳೆ ತಾನು ಸಿಕ್ಕಿಬಿದ್ದು 14 ವರ್ಷ ಕಠಿಣ ಶಿಕ್ಷೆಗೆ ಒಳಗಾಗಿದ್ದೆ. ಸರ್ಕಾರ ತನಗೆ ಈ ವೇಳೆ ನೀಡಬೇಕಿದ್ದ ವೇತನವನ್ನು ಕಟ್ ಮಾಡಿದೆ. ಇದನ್ನು ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.