ನವದೆಹಲಿ: ಈ ಸಂದರ್ಭದಲ್ಲಿ 'ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್' ಅನ್ನು ಸಕ್ರಿಯಗೊಳಿಸುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಂಗಳವಾರ ಹೇಳಿದೆ. ಸಂಕಷ್ಟದ ಸಮಯದಲ್ಲಿ ಆರ್ಥಿಕತೆಗೆ ಸುಸ್ಥಿರವಾದ ಸಾಲವನ್ನು ಉತ್ತೇಜಿಸಲು ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್ (CCyB) ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಇದು ಈಗ ಬ್ಯಾಂಕುಗಳಿಗೆ ಇರುವ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಫೆಬ್ರವರಿ 5, 2015 ರಂದು ನೀಡಲಾದ ಮಾರ್ಗಸೂಚಿಗಳ ಪ್ರಕಾರ, 'ಸಿಸಿವೈಬಿ' ನ ಚೌಕಟ್ಟನ್ನು ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ. ಅದರಂತೆ, 'CCyB' ಅನ್ನು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಸಕ್ರಿಯಗೊಳಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕುರಿತಾದ ಮಾಹಿತಿಯನ್ನ ಮುಂಚಿತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.