ಕರ್ನಾಟಕ

karnataka

ETV Bharat / bharat

'ಕೈ' ಬಿಡಲಿರುವ ಅಮರೀಂದರ್ ಸಿಂಗ್.. 'ಕಮಲ' ಹಿಡಿಯಲ್ಲ ಎಂದು ಸ್ಪಷ್ಟನೆ

ಇಷ್ಟು ವರ್ಷಗಳ ಸೇವೆಯ ನಂತರವೂ ನನ್ನ ಮೇಲೆ ನಂಬಿಕೆ, ವಿಶ್ವಾಸವಿಲ್ಲವಾದ ಮೇಲೆ ನಾನು ಪಕ್ಷದಲ್ಲಿ ಇರುವುದರಲ್ಲಿ ಅರ್ಥವೇನು? ಬಿಜೆಪಿಗೆ ಸೇರಲ್ಲ. ಆದ್ರೆ ಕಾಂಗ್ರೆಸ್​ ತೊರೆಯುವುದು ಬಹುತೇಕ ಖಚಿತ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.

ಅಮರೀಂದರ್ ಸಿಂಗ್
ಅಮರೀಂದರ್ ಸಿಂಗ್

By

Published : Sep 30, 2021, 2:06 PM IST

ಚಂಡಿಗಢ (ಪಂಜಾಬ್​):ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೊಸ ಪಕ್ಷ ಕಟ್ಟುತ್ತಾರೆ, ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿಗಳಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈಗ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಒಂದು ದಿನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಂಗ್​, ಕಾಂಗ್ರೆಸ್​ ತೊರೆಯುವುದು ಬಹುತೇಕ ಖಚಿತ. ಆದರೆ, ಬಿಜೆಪಿಗೆ ಸೇರ್ಪಡೆಯಾಗಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪಕ್ಷ ಸೇರ್ಪಡೆ ಅಲ್ಲ, ರೈತರ ಸಮಸ್ಯೆ ಬಗ್ಗೆ ಅಮಿತ್ ಶಾ ಜೊತೆ ಚರ್ಚಿಸಿದ್ದೇನೆ: ಕ್ಯಾ.ಅಮರೀಂದರ್ ಸಿಂಗ್​

"ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಸೆಪ್ಟೆಂಬರ್ 18 ರಂದು ಬೆಳಗ್ಗೆ 10.30ಕ್ಕೆ ಕಾಂಗ್ರೆಸ್ ಅಧ್ಯಕ್ಷರು ಬಂದು (ನವಜೋತ್ ಸಿಂಗ್ ಸಿಧು) ನೀವು ರಾಜೀನಾಮೆ ನೀಡಿರಿ ಎಂದು ಹೇಳಿದರು. ನಾನು ಮರುಪ್ರಶ್ನೆ ಕೇಳಲಿಲ್ಲ. ಸಂಜೆ 4 ಗಂಟೆಗೆ ನಾನು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದೆ. ಇಷ್ಟು ವರ್ಷಗಳ ಸೇವೆಯ ನಂತರವೂ ನನ್ನ ಮೇಲೆ ನಂಬಿಕೆ, ವಿಶ್ವಾಸವಿಲ್ಲವಾದ ಮೇಲೆ ನಾನು ಪಕ್ಷದಲ್ಲಿ ಇರುವುದರಲ್ಲಿ ಅರ್ಥವೇನು?" ಎಂದು ಹೇಳಿದ್ದಾರೆ.

ABOUT THE AUTHOR

...view details