ಶಿಮ್ಲಾ, ಹಿಮಾಚಲ ಪ್ರದೇಶ:ಇತ್ತೀಚೆಗೆ ಜಾರ್ಖಂಡ್ ವಿಧಾನಸಭಾ ಕಟ್ಟಡದಲ್ಲಿ ಮುಸ್ಲಿಂ ಸಮುದಾಯದ ಶಾಸಕರಿಗೆ ನಮಾಜ್ ಮಾಡಲು ಪ್ರತ್ಯೇಕ ಕೊಠಡಿ ನೀಡಿದ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಬಿಹಾರದ ವಿಧಾನಸಭೆಯಲ್ಲೂ ಇಂತಹುದ್ದೇ ಒಂದು ಬೇಡಿಕೆ ಕೇಳಿಬಂದಿತ್ತು.
ಆದರೆ, ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭಾ ಇತಿಹಾಸ ಭಿನ್ನವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇ-ಶಾಸಕಾಂಗ (e-legislation) ವ್ಯವಸ್ಥೆ ಜಾರಿಗೆ ತಂದಿರುವ ಈ ರಾಜ್ಯದಲ್ಲಿ ಈವರೆಗೆ ಅಲ್ಪಸಂಖ್ಯಾತ ಶಾಸಕರು ಆಯ್ಕೆಯಾಗಿಲ್ಲ.
ಸುಮಾರು 68 ವಿಧಾನಸಭಾ ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಮೊದಲಿನಿಂದಲೂ ಬ್ರಾಹ್ಮಣರು ಮತ್ತು ರಜಪೂತರದ ಪ್ರಾಬಲ್ಯವಿದೆ. ಮುಸ್ಲೀಮರ ಪ್ರಾಬಲ್ಯ ಕೇವಲ ಶೇಕಡಾ 2.1ರಷ್ಟಿರುವ ಕಾರಣದಿಂದಾಗಿ ಈವರೆಗೆ ಯಾವ ಮುಸ್ಲಿಂ ವ್ಯಕ್ತಿಯೂ ಶಾಸಕನಾಗಿ ಆಯ್ಕೆಯಾಗಿಲ್ಲ.