ಇಂದೋರ್; 'ಮಾವಿನ ಮಾಲೀಕ' ಎಂದು ಕರೆಯಲ್ಪಡುವ 'ನೂರ್ ಜಹಾನ್' ಮಾವಿನ ತಳಿ ಈ ಬಾರಿ ಉತ್ತಮ ಫಸಲು ಬಿಟ್ಟಿದೆ. ಹೆಚ್ಚು ತೂಕವುಳ್ಳ ಈ ಮಾವಿನಕಾಯಿಗಳನ್ನು ಈಗಾಗಲೇ ಹಣ್ಣಾಗುವ ಮೊದಲೇ ಹೆಚ್ಚಿನ ಬೆಲೆಗೆ ಜನ ಮುಂಗಡ ಬುಕ್ಕಿಂಗ್ ಮಾಡ್ತಿದ್ದಾರೆ.
ಅಫ್ಘಾನ್ ಮೂಲದ್ದು ಎನ್ನಲಾಗುವ ಮಾವಿನ ತಳಿಯಾದ ನೂರ್ ಜಹಾನ್ನ ಕೆಲವು ಮರಗಳು ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಕಟ್ಟಿವಾಡ ಪ್ರದೇಶದಲ್ಲಿ ಕಂಡು ಬರುತ್ತವೆ. ಈ ಪ್ರದೇಶವು ಗುಜರಾತ್ ಪಕ್ಕದಲ್ಲಿದೆ. ಇಂದೋರ್ನಿಂದ 250 ಕಿ.ಮೀ ದೂರದಲ್ಲಿರುವ ಕಟ್ಟಿವಾಡಾದ ಮಾವಿನ ಬೆಳೆಗಾರ ಶಿವರಾಜ್ ಸಿಂಗ್ ಜಾಧವ್, ತಮ್ಮ ತೋಟದಲ್ಲಿ ಮೂರು ನೂರ್ ಜಹಾನ್ ಮಾವಿನ ಮರಗಳಲ್ಲಿ ಒಟ್ಟು 250 ಹಣ್ಣುಗಳಿವೆ ಎಂದು ಹೇಳಿದ್ದು, ಅವೆಲ್ಲವೂ ಈಗಾಗಲೇ ಹಣ್ಣಾಗುವ ಮೊದಲೇ ಬುಕ್ ಆಗಿವೆಯಂತೆ.