ಅಸನ್ಸೋಲ್ (ಪಶ್ಚಿಮ ಬಂಗಾಳ) : "ಉಚಿತ ಲಸಿಕೆ" ನೀಡುವುದಾಗಿ ಹೇಳಿದ್ದ ಮಮತಾ ಬ್ಯಾನರ್ಜಿ ಹೇಳಿಕೆಯ ವಿರುದ್ಧ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಇಂತಹ "ಅಸಂಬದ್ಧ" ಹೇಳಿಕೆಯಿಂದ ದೂರವಿರಬೇಕೆಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸುಪ್ರಿಯೋ, ಕೇಂದ್ರ ಸರ್ಕಾರವು ಈಗಾಗಲೇ ಜನರಿಗೆ ಲಸಿಕೆಗಳನ್ನು ಉಚಿತವಾಗಿ ಘೋಷಿಸಿದೆ. "ಪ್ರಧಾನ ಮಂತ್ರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ನಡೆಸಿದ್ದಾರೆ. ಖಂಡಿತವಾಗಿಯೂ, ಎಲ್ಲ ರಾಜ್ಯ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುವ ಕೇಲಸ ಮಾಡಬೇಕಾಗುತ್ತದೆ. ಉಚಿತ ಲಸಿಕೆ ನೀಡುವಂತಹ ಅಸಂಬದ್ಧತೆ ಹೇಳಿಕೆಯನ್ನ ನೀಡಬಾರದೆಂದು ನಾನು ಮಮತಾ ಬ್ಯಾನರ್ಜಿಯವರಲ್ಲಿ ವಿನಂತಿಸುತ್ತೇನೆ ಎಂದರು."