ಸೂರತ್ (ಗುಜರಾತ್): ನವರಾತ್ರಿ ಆಚರಣೆಗೂ ಮುನ್ನವೇ ಗುಜರಾತ್ನಲ್ಲಿ ಈ ಬಾರಿ ಗರ್ಬಾ ವಿವಾದ ಶುರುವಾಗಿದೆ. ಹಿಂದೂಗಳನ್ನು ಹೊರತುಪಡಿಸಿ ಹಿಂದೂಯೇತರರಿಗೆ ಗರ್ಬಾ ನೃತ್ಯದಲ್ಲಿ ಭಾಗವಹಿಸುತ್ತಿಲ್ಲ ಮತ್ತು ಗರ್ಬಾ ತರಗತಿಗಳಿಗೆ ಹಿಂದೂಯೇತರರನ್ನು ಸೇರಿಸಿಕೊಳ್ಳಬಾರದು ಎಂಬ ಅಲಿಖಿತ ನಿರ್ಬಂಧ ವಿಧಿಸಲಾಗುತ್ತಿದೆ.
ಇತ್ತೀಚೆಗೆ ಗುಜರಾತ್ನಲ್ಲಿ ಲವ್ ಜಿಹಾದ್ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನವರಾತ್ರಿ ಹಬ್ಬದ ಆಚರಣೆ ಹಾಗೂ ಗರ್ಬಾ ತರಗತಿಗಳ ಸಂಘಟಕರಿಗೆ ಕೆಲವು ಹಿಂದೂ ಸಂಘಟನೆಗಳು ಮತ್ತು ಸೂರತ್‌ನ ಬಿಜೆಪಿ ಕೌನ್ಸಿಲರ್‌ಗಳು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸೂರತ್‌ನ ಪ್ರತಿಷ್ಠಿತ ಖೋಡಲ್‌ಧಾಮ್ ಸಂಸ್ಥೆ ಕೂಡ ಗರ್ಬಾ ತರಗತಿಗಳಿಗೆ ಹಿಂದೂಯೇತರರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಗರ್ಬಾ ಆಡುವವರ ಗುರುತಿನ ಚೀಟಿ ಪರಿಶೀಲಿಸಲಾಗುವುದು. ಅಲ್ಲದೇ, ನವರಾತ್ರಿ ಸಂದರ್ಭದಲ್ಲಿ ಹಿಂದೂ ಯುವತಿಯರು ಬೇರೆ ಯಾವುದೇ ಧರ್ಮದ ಯುವಕರನ್ನು ಭೇಟಿ ಆಗುವುದನ್ನು ತಡೆಯಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಧಾರ್ಮಿಕ್ ಮಾಳವೀಯ ತಿಳಿಸಿದ್ದಾರೆ.