ಕರ್ನಾಟಕ

karnataka

ETV Bharat / bharat

ಇಂದು ಧರೆಗುರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು.. 3,700 ಕೆಜಿ ಸ್ಫೋಟಕ ಬಳಕೆ - Etv bharat kannada

ನಿಯಮ ಮೀರಿ ಅಕ್ರಮವಾಗಿ ನಿರ್ಮಾಣಗೊಂಡಿರುವ ನೋಯ್ಡಾದ ಬೃಹತ್ ಕಟ್ಟಡಗಳು ಇಂದು ಧರೆಗೆ ಉರಳಿದ್ದು, ಅದಕ್ಕಾಗಿ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ.

Noida Twin Towers  Demolish timeline
Noida Twin Towers Demolish timeline

By

Published : Aug 27, 2022, 5:15 PM IST

Updated : Aug 28, 2022, 6:49 AM IST

ನೋಯ್ಡಾ(ಉತ್ತರ ಪ್ರದೇಶ):ಬರೋಬ್ಬರಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೋಯ್ಡಾದ ಅವಳಿ ಗೋಪುರ ಇಂದು ಧರೆಗೆ ಉರುಳಲಿವೆ. ಅದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದ್ದು, ಕಾರ್ಯಾಚರಣೆಗೋಸ್ಕರ 3,700 ಕೆಜಿ ಸ್ಫೋಟಕ ಬಳಕೆ ಮಾಡಿಕೊಳ್ಳುತ್ತಿದೆ. ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭಗೊಳ್ಳಲಿದೆ.

12 ಸೆಕೆಂಡ್​​​ಗಳಲ್ಲಿ ಸ್ಫೋಟ: ಮಧ್ಯಾಹ್ನ 2:30ಕ್ಕೆ ಕೇವಲ 12 ಸೆಂಕೆಡ್​​​ಗಳಲ್ಲಿ ಅವಳಿ ಗೋಪುರ ಸ್ಫೋಟಗೊಂಡು ಧರೆಗೆ ಉರುಳಲಿದ್ದು, ಈ ವೇಳೆ ಎನ್​​ಡಿಆರ್​​ಎಫ್​, ಸಿಬಿಆರ್​​ಐ ಸೇರಿದಂತೆ ಇತರೆ ಅಧಿಕಾರಿಗಳ ಉಪಸ್ಥಿತಿ ಇರಲಿದೆ. ಇದಕ್ಕೋಸ್ಕರ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ.

ಧರೆಗೆ ಉರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು

ಸಂಪೂರ್ಣ ಸೇವೆ ಬಂದ್​​: ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಎಲ್ಲರನ್ನೂ ಜಾಗ ಖಾಲಿ ಮಾಡಿಸಲಿದ್ದಾರೆ. ಇದಾದ ಬಳಿಕ ಈ ಪ್ರದೇಶದಲ್ಲಿ ವಿದ್ಯುತ್​, ಅನಿಲ್​ ಸೇರಿದಂತೆ ಎಲ್ಲ ಸೇವೆಗಳು ಬಂದ್​ ಆಗಲಿವೆ. ಕಟ್ಟಡ ಸ್ಫೋಟಗೊಂಡ ನಂತರ ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭಗೊಳ್ಳಲಿವೆ. ನಂತರ ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದಾಗಿದೆ.

ಇದನ್ನೂ ಓದಿ:ನೋಯ್ಡಾ ಅವಳಿ ಕಟ್ಟಡ ಕೆಡವಲು ಮುಹೂರ್ತ ಫಿಕ್ಸ್​.. 3700 ಕೆಜಿ ಸ್ಫೋಟಕ ಸಜ್ಜು

915 ಫ್ಲ್ಯಾಟ್​​​ಗಳು, 20 ಕಮರ್ಷಿಯಲ್ ಅಂಗಡಿ: ಇನ್ನೂ ಬಿಲ್ಡಿಂಗ್​​ ಸ್ಫೋಟಗೊಳ್ಳುತ್ತಿದ್ದಂತೆ ಸುತ್ತಮುತ್ತಲಿನ ಸುಮಾರು 30 ಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಲಿದೆ. ಜೊತೆಗೆ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಧೂಳು ತುಂಬಿಕೊಳ್ಳಲಿದೆ. ಸೂಪರ್ ಟೆಕ್ ಕಂಪನಿ ಈ ಅವಳಿ ಗೋಪುರ ನಿರ್ಮಾಣ ಮಾಡಲು ಬರೋಬ್ಬರಿ 70 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಇದರಲ್ಲಿ ಒಟ್ಟು 915 ಫ್ಲ್ಯಾಟ್​​​ಗಳು, 20 ಕಮರ್ಷಿಯಲ್ ಅಂಗಡಿಗಳಿವೆ. ಈ ಕಟ್ಟಡ ಧ್ವಂಸದಿಂದಾಗಿ ಸುಮಾರು ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಲಾಗ್ತಿದೆ.

70 ಕೋಟಿ ವೆಚ್ಚದ ನೋಯ್ಡಾ ಬೃಹತ್​​ ಕಟ್ಟಡಗಳು

ಕಾನೂನು ಬಾಹಿರವಾಗಿ ನಿರ್ಮಾಣ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿ ಎಂಬ ಎರಡು ಅವಳಿ ಗೋಪುರ 2004ರಲ್ಲಿ ನಿರ್ಮಾಣ ಮಾಡಲಾಗಿದ್ದು, ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿದೆ. ಅಕ್ರಮವಾಗಿ ಈ ಕಟ್ಟಡವನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡಿರುವ ಕಾರಣ ಸುಪ್ರೀಂಕೋರ್ಟ್​​ 2021ರಲ್ಲಿ ಕಟ್ಟಡ ಧ್ವಂಸಗೊಳಿಸಲು ಆದೇಶ ನೀಡಿತ್ತು. ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು. ಹೀಗಾಗಿ, ಕಳೆದ 10 ದಿನಗಳಿಂದ ಎರಡು ಬಿಲ್ಡಿಂಗ್​​ನಲ್ಲಿ ಸ್ಫೋಟಕ ತುಂಬಲಾಗಿದೆ.

ಅವಳಿ ಕಟ್ಟಡ ಬ್ಲಾಸ್ಟ್ ಮಾಡಲಿರುವ ಚೇತನ್​ ದತ್ತಾ:ಎಡಿಫೈಸ್ ಇಂಜಿನಿಯರಿಂಗ್ ಮಾಡಿರುವ ಚೇತನ್​ ದತ್ತಾ ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಬಟನ್​ ಒತ್ತುವ ಮೂಲಕ ಬಿಲ್ಡಿಂಗ್​​ ಧ್ವಂಸ ಮಾಡಲಿದ್ದಾರೆ. ಬಿಲ್ಡಿಂಗ್ ನೆಲಸಮಗೊಂಡ ನಂತರ ಈ ಪ್ರದೇಶದಲ್ಲಿ ಪರಿಶೀಲನೆ ಕಾರ್ಯ ಸಹ ನಡೆಯಲಿದೆ.

Last Updated : Aug 28, 2022, 6:49 AM IST

ABOUT THE AUTHOR

...view details