ಕರ್ನಾಟಕ

karnataka

ETV Bharat / bharat

ಬಂಗಾ ವಿಭೂಷಣ ಪ್ರಶಸ್ತಿ ತಿರಸ್ಕರಿಸಿದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್: ಕುಟುಂಬಸ್ಥರ ಮಾಹಿತಿ - Etv bharat kannada

Amartya Sen rejects Banga Vibhushan award.. ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಪಶ್ಚಿಮ ಬಂಗಾಳ ಸರ್ಕಾರ ನೀಡುವ ಬಂಗಾ ವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Nobel laureate Amartya Sen
ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

By

Published : Jul 24, 2022, 8:48 PM IST

ಶಾಂತಿನಿಕೇತನ:ಪಶ್ಚಿಮ ಬಂಗಾಳ ಸರ್ಕಾರ ನೀಡುವ ಬಂಗಾ ವಿಭೂಷಣ ಗೌರವವನ್ನು ಅಮರ್ತ್ಯ ಸೇನ್ ಸ್ವೀಕರಿಸುತ್ತಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರ ಕುಟುಂಬ ಮೂಲಗಳು ತಿಳಿಸಿವೆ. ಆದರೆ, ಕುಟುಂಬದವರು ಈ ಬಗ್ಗೆ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ರಾಜ್ಯ ಸರ್ಕಾರ ನೀಡುವ ಬಂಗಾ ವಿಭೂಷಣ ಗೌರವವನ್ನು ಏಕೆ ಸ್ವೀಕರಿಸುತ್ತಿಲ್ಲ ಎಂಬುದಕ್ಕೆ ಕುಟುಂಬದವರು ಕಾರಣ ನೀಡಿಲ್ಲ.

ಡಾ. ಅಮರ್ತ್ಯ ಸೇನ್ ಪ್ರಸ್ತುತ ವಿದೇಶದಲ್ಲಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ, ಈ ವರ್ಷ 'ಬಂಗಾ ವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ರಾಜ್ಯ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಅಲ್ಲದೇ ಸರ್ಕಾರದಿಂದ ಪತ್ರದ ಮೂಲಕ ಅವರನ್ನು ಆಹ್ವಾನಿಸಲಾಗಿದೆ.

ಆದರೆ ಈ ಗೌರವವನ್ನು ಸ್ವೀಕರಿಸುವುದಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಈ ನಿರ್ಧಾರವನ್ನು ಅವರು ಬಂಗಾ ವಿಭೂಷಣ ಪ್ರಶಸ್ತಿ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ:UPSC ಪರೀಕ್ಷೆ ಪಾಸ್​ ಆಗಲಿಲ್ಲ, ನೋಡೋಕೆ ಚೆನ್ನಾಗಿಲ್ಲ ಅಂತಾ ನೆಪ.. ವಿಚ್ಛೇದನಕ್ಕೆ ಮುಂದಾದ ಪತಿ!


ABOUT THE AUTHOR

...view details