ಬೋಲ್ಪುರ್(ಪಶ್ಚಿಮ ಬಂಗಾಳ): ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ, ಭಾರತರತ್ನ ಅಮರ್ತ್ಯ ಸೇನ್ ಅವರಿಗೆ ಭಾರತೀಯ ಅಂಚೆ ಇಲಾಖೆ ಆಧಾರ್ ಕಾರ್ಡ್ ವಿತರಣೆ ಮಾಡಿದೆ. ಈ ಬಗ್ಗೆ ಅಂಚೆ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತರತ್ನ, ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥ ಶಾಸ್ತ್ರಜ್ಞರಿಂದ ಆಧಾರ್ ಕಾರ್ಡ್‌ಗೆ ವಿನಂತಿ ಪಡೆಯುವುದು ಮತ್ತು ಅವರನ್ನು ಆಧಾರ್ ಕಾರ್ಡ್‌ಗೆ ನೋಂದಾಯಿಸಿರುವುದು ನಮಗೆ ದೊಡ್ಡ ಗೌರವವಾಗಿದೆ ಎಂದು ಹೇಳಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಶಾಂತಿನಿಕೇತನದಲ್ಲಿರುವ ತಮ್ಮ ಮನೆಗೆ ಆಗಮಿಸಿದ್ದ ಅವರು, ಬೋಲ್ಪುರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರು. ಅಮರ್ತ್ಯ ಸೇನ್ ಅವರ ಮನವಿಯಂತೆ ಅಂಚೆ ಇಲಾಖೆಯ ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಸುವ ಎಲ್ಲ ಸಾಧನಗಳ ಜತೆ ಮನೆಗೆ ಬಂದಿದ್ದಾರೆ. ಈ ವೇಳೆ ಫೋಟೋ ಮತ್ತು ಬಯೋಮೆಟ್ರಿಕ್ ಯಂತ್ರಗಳ ಮೂಲಕ ಸೇನ್ ಮನೆಯಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿ ಸ್ಥಳದಲ್ಲೇ ವಿತರಿಸಲಾಯಿತು.
ಪಶ್ಚಿಮ ಬಂಗಾಳದ ಅಂಚೆ ಇಲಾಖೆಯು ಫೇಸ್‌ಬುಕ್‌ನಲ್ಲಿ ಅಮರ್ತ್ಯ ಸೇನ್ ಅವರಿಗೆ ಆಧಾರ್ ಕಾರ್ಡ್ ವಿತರಿಸುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಬಿರ್ಭುಮ್ ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಸುಬ್ರತಾ ದತ್ತಾ, ಭಾರತ ರತ್ನ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಂದ ಆಧಾರ್ ಕಾರ್ಡ್‌ಗೆ ವಿನಂತಿ ಪಡೆಯುವುದು ನಮಗೆ ದೊಡ್ಡ ಗೌರವವಾಗಿದೆ.