ಕರ್ನಾಟಕ

karnataka

ETV Bharat / bharat

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ತಾಯಿ ನಿರ್ಮಲಾ ಬ್ಯಾನರ್ಜಿ ನಿಧನ - ತಾಯಿ ನಿರ್ಮಲಾ ಬ್ಯಾನರ್ಜಿ

Nirmala banerjee passes away:ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ನಿಧನರಾಗಿದ್ದಾರೆ.

Nirmala banerjee passes away
ನಿರ್ಮಲಾ ಬ್ಯಾನರ್ಜಿ ನಿಧನ

By ETV Bharat Karnataka Team

Published : Nov 3, 2023, 4:09 PM IST

ಕೋಲ್ಕತ್ತಾ:ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಾಯಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಅಭಿಜಿತ್ ವಿನಾಯಕ್ ಬ್ಯಾನರ್ಜಿ ಇಂದು ಕೋಲ್ಕತ್ತಾಗೆ ಆಗಮಿಸಿದ್ದರು. ತಾಯಿಯನ್ನು ನೋಡಲು ಮುಕುಂದಾಪುರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ, ಇಂದು ಮಧ್ಯಾಹ್ನ 12.35ಕ್ಕೆ ನಿರ್ಮಲಾ ಬ್ಯಾನರ್ಜಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಿಎಂ ಮಮತಾ ಬ್ಯಾನರ್ಜಿ ಸಂತಾಪ: ನಿನ್ನೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಮಲಾ ಬ್ಯಾನರ್ಜಿ ಅವರನ್ನು ನೋಡಲು ಆಸ್ಪತ್ರೆಗೆ ತೆರಳಿದ್ದರು. ಅವರನ್ನು ನೋಡಿದ ಬಳಿಕ ಈ ಕುರಿತು ರಾಜಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದರು. "ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ಪ್ರೊಫೆಸರ್ ನಿರ್ಮಲಾ ಬ್ಯಾನರ್ಜಿ ಅವರನ್ನು ನೋಡಲು ಆರ್​ ಎನ್​ ಟ್ಯಾಗೂರ್​ ಆಸ್ಪತ್ರೆಗೆ ಹೋಗಿದ್ದೆ. ನನಗೆ ಮೊದಲೇ ಅವರ ಪರಿಚಯವಿತ್ತು. ಅವರು ಬಿದ್ದು ತಲೆಗೆ ಪೆಟ್ಟಾಗಿದೆ. ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿ ನಾನು ನೋಡಲು ಹೋಗಿದ್ದೆ. ಅಭಿಜಿತ್​ ವಿನಾಯಕ್​ ಬ್ಯಾನರ್ಜಿ ನಾಳೆ ಕೋಲ್ಕತ್ತಾಗೆ ಬರಲಿದ್ದಾರೆ" ಎಂದು ತಿಳಿಸಿದ್ದರು.

ಆದರೆ ಇಂದು ಅವರ ನಿಧನ ಹೊಂದಿದ್ದು ಮುಖ್ಯಮಂತ್ರಿಗಳು ತಮ್ಮ ಎಕ್ಸ್​ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. " ಖ್ಯಾತ ಅರ್ಥಶಾಸ್ತ್ರಜ್ಞೆ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ.ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ಪ್ರೊ.ನಿರ್ಮಲಾ ಬ್ಯಾನರ್ಜಿ ಅವರ ನಿಧನಕ್ಕೆ ತೀವ್ರ ದುಃಖವಾಗಿದೆ. ಅವರು ಇಂದು ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದರು. ನಾನು ನಿನ್ನೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೆ. ಪ್ರೊ. ನಿರ್ಮಲಾ ಬ್ಯಾನರ್ಜಿ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮತ್ತು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಅರ್ಥಶಾಸ್ತ್ರದ ಮಾಜಿ ಪ್ರಾಧ್ಯಾಪಕರಾಗಿದ್ದರು. ಅವರು ಪ್ರೆಸಿಡೆನ್ಸಿ ಕಾಲೇಜಿನ ಪ್ರಖ್ಯಾತ ಅರ್ಥಶಾಸ್ತ್ರಜ್ಞ ದಿವಂಗತ ಪ್ರೊ. ದೀಪಕ್ ಬ್ಯಾನರ್ಜಿ ಅವರನ್ನು ವಿವಾಹವಾದರು. ನಾನು ನಿರ್ಮಲಾ ಅವರನ್ನು ಚೆನ್ನಾಗಿ ಅರಿತುಕೊಂಡಿದ್ದೆ ಮತ್ತು ಅನೇಕ ಸಿಹಿ ನೆನಪುಗಳು ಇವೆ. ಅವರ ನಿಧನ ನಮ್ಮ ಜನಜೀವನಕ್ಕೆ ತುಂಬಲಾರದ ನಷ್ಟ. ಕುಟುಂಬ ಸದಸ್ಯರಿಗೆ ಮತ್ತು ನಿರ್ಮಲಾ ಅವರ ಸ್ನೇಹಿತರಿಗೆ ಮತ್ತು ವಿದ್ಯಾರ್ಥಿಗಳಿಗೆ ನನ್ನ ಆಳವಾದ ಸಂತಾಪಗಳು"

ನಿರ್ಮಲಾ ಬ್ಯಾನರ್ಜಿ ಅವರಿಗೆ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನರರೋಗ ತಜ್ಞ ವಿಭಾಗದ ಡಾ.ಅನಿಮೇಶ್ ಕರ್ ಮತ್ತು ಪಲ್ಮನಾಲಜಿಸ್ಟ್ ವಿಭಾಗದ ಡಾ.ಸೌರಭ್ ಮಾಝಿ ಅವರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಪ್ರಕಾರ ನಿನ್ನೆ ಬೆಳಗ್ಗೆಯಿಂದ ಅವರಿಗೆ ಪ್ರಜ್ಞೆ ಇರಲಿಲ್ಲ.

ಇದನ್ನೂ ಓದಿ:ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ತಾಯಿ ಸ್ಥಿತಿ ಗಂಭೀರ; ಆಸ್ಪತ್ರೆಗೆ ಮಮತಾ ಬ್ಯಾನರ್ಜಿ ಭೇಟಿ

ABOUT THE AUTHOR

...view details