ಕರ್ನಾಟಕ

karnataka

ETV Bharat / bharat

ತಮಿಳುನಾಡು ಚುನಾವಣೆಗೆ ಸೇಲಂ ಗಣಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ.. ಅದಕ್ಕೆ ಕಾರಣ ಇಲ್ಲದಿಲ್ಲ - ‘ಸೇಲಂನಲ್ಲಿ ಮ್ಯಾಗ್ನಾಸೈಟ್ ಗಣಿಗಳು

ಕೇಂದ್ರ ಪರಿಸರ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 2016ರಲ್ಲಿ ಈ ಗಣಿಗಳನ್ನು ಮುಚ್ಚಲಾಯಿತು. ಅದರಲ್ಲೂ ಸೇಲ್ ರಿಫ್ರಾಕ್ಟರಿ ಕಂಪನಿ, ದಾಲ್ಮಿಯಾ ಮ್ಯಾಗ್ನಾಸೈಟ್​, ತಮಿಳುನಾಡು ಮ್ಯಾಗ್ನಾಸೈಟ್ ಮುಂತಾದ ಕಂಪನಿಗಳು ಕಾರ್ಮಿಕ ವಿರೋಧಿ ನೀತಿ ಮತ್ತು ಇತರ ನಿಯಮಗಳನ್ನು ಉಲ್ಲಂಘಿಸುತ್ತಿವೆ..

No Work Since Months, Magnesite Miners To Boycott Polls in TN
ತಮಿಳುನಾಡು ಚುನಾವಣೆಗೆ ಸೇಲಂ ಗಣಿ ಕಾರ್ಮಿಕರಿಂದ ಮತದಾನ ಬಹಿಷ್ಕಾರ

By

Published : Apr 3, 2021, 5:17 PM IST

ಸೇಲಂ, ತಮಿಳುನಾಡು :ವಿಧಾನಸಭಾ ಚುನಾವಣೆ ತಮಿಳುನಾಡಿನಲ್ಲಿ ರಂಗೇರಿವೆ. ಎಲ್ಲೆಡೆ ಪಕ್ಷಗಳು ಅದ್ದೂರಿ ಮತ ಪ್ರಚಾರ ಕೈಗೊಂಡಿದ್ದು, ಮತದಾರರನ್ನು ಓಲೈಸಲು ಕಸರತ್ತು ನಡೆಸುತ್ತಿವೆ.

ಇದರ ಬೆನ್ನಲ್ಲೇ ಸೇಲಂ ಜಿಲ್ಲೆಯ ಹಲವು ಕಬ್ಬಿಣದ ಅದಿರು ಉತ್ಪಾದನೆ ಮಾಡುವ ಗಣಿಗಳ ಕಾರ್ಮಿಕರು ಈ ಬಾರಿಯ ವಿಧಾನಸಭಾ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ಮತದಾನ ಮಾಡಲು ವಿರೋಧವೇಕೆ?:ಸೇಲಂನ ಹಲವು ಪ್ರದೇಶಗಳಲ್ಲಿ ಮ್ಯಾಗ್ನಾಸೈಟ್ ಎಂಬ ಕಬ್ಬಿಣದ ಅದಿರನ್ನು ಉತ್ಪಾದನೆ ಮಾಡುವ ಗಣಿಗಳಿವೆ. ಕಳೆದ ಐದು ವರ್ಷಗಳಿಂದ ಗಣಿಗಳನ್ನು ಮುಚ್ಚಲಾಗಿದೆ. ಪರಿಸರದ ಮೇಲೆ ಈ ಕಬ್ಬಿಣದ ಗಣಿಗಾರಿಕೆಯಿಂದ ದುಷ್ಪರಿಣಾಮಗಳಿವೆ ಎಂಬ ಆರೋಪದ ಮೇಲೆ ಗಣಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ:ಚಲಿಸುವ ಕಾರುಗಳು ಆಕಸ್ಮಿಕವಾಗಿ ಧಗಧಗಿಸೋದ್ಯಾಕೆ?

ಸುಮಾರು ಎರಡು ತಿಂಗಳಿನಿಂದ ಗಣಿಗಳನ್ನು ತೆರೆಯಲು ಅಲ್ಲಿನ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯವಾಗಿದ್ದ ಈ ಗಣಿಗಳನ್ನು ಮುಚ್ಚಿರುವುದರಿಂದ ಅಲ್ಲಿನ ಜನರಿಗೆ ಬೇರೆ ದಾರಿ ಕಾಣದಾಗಿದೆ. ಇದರಿಂದಾಗಿ ಗಣಿ ಕಂಪನಿಗಳ ಗೇಟ್​​ಗಳ ಬಳಿ ಕಾರ್ಮಿಕರು ಪ್ರತಿಭಟಿಸುತ್ತಿದ್ದಾರೆ.

ಸೇಲಂ ಗಣಿಗಳ ಬಗ್ಗೆ ಮತ್ತೊಂದಿಷ್ಟು :ಸೇಲಂನಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶಗಳಲ್ಲಿ ಗಣಿಗಳಿವೆ. ಇಲ್ಲಿನ ಬಿಳಿ ಕಲ್ಲುಗಳೂ ಕೂಡ ಸಿಗುತ್ತಿದ್ದವು. ಇವುಗಳನ್ನು ಪುಡಿ ಮಾಡಿ, ಸ್ಲ್ಯಾಬ್​ಗಳನ್ನಾಗಿ ಮಾಡಿ ರಫ್ತು ಮಾಡಲಾಗುತ್ತಿತ್ತು. ಸೇಲಂ ಜಿಲ್ಲೆಯ ಕರುಪ್ಪು, ಸೆಂಗಾರ್ಡು, ದಾಲ್ಮಿಯಾಬೋರ್ಡ್​, ಮಾಮನ್ಗಂ, ವೆಲ್ಲಾಲ್​ಪಟ್ಟಿ ಸೇರಿ ಸುಮಾರು 20 ಗ್ರಾಮಗಳ ಜನರಿಗೆ 1971ರಿಂದ ಈ ಗಣಿಗಳೇ ಜೀವನೋಪಾಯಕ್ಕೆ ಆಧಾರವಾಗಿದ್ದವು.

ಇದನ್ನೂ ಓದಿ:ಭಾರತದ ಬಗ್ಗೆ ಅಮೆರಿಕ ಸೈಲೆಂಟಾಗಿದೆ, 'ನನಗೆ ಆರ್ಥಿಕ ಸಮಾನತೆ ಬೇಕು'- ರಾಹುಲ್ ಗಾಂಧಿ

ಕೇಂದ್ರ ಪರಿಸರ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 2016ರಲ್ಲಿ ಈ ಗಣಿಗಳನ್ನು ಮುಚ್ಚಲಾಯಿತು. ಅದರಲ್ಲೂ ಸೇಲ್ ರಿಫ್ರಾಕ್ಟರಿ ಕಂಪನಿ, ದಾಲ್ಮಿಯಾ ಮ್ಯಾಗ್ನಾಸೈಟ್​, ತಮಿಳುನಾಡು ಮ್ಯಾಗ್ನಾಸೈಟ್ ಮುಂತಾದ ಕಂಪನಿಗಳು ಕಾರ್ಮಿಕ ವಿರೋಧಿ ನೀತಿ ಮತ್ತು ಇತರ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆ ಸುಮಾರು 5 ವರ್ಷಗಳಿಂದ ಗಣಿ ಕಂಪನಿಗಳನ್ನು ಮುಚ್ಚಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಸುಮಾರು ಎರಡು ತಿಂಗಳಿಂದ ಗಣಿ ಕಂಪನಿಗಳ ಪುನಾರಂಭಕ್ಕೆ ಧರಣಿಗಳನ್ನು ನಡೆಸುತ್ತಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ABOUT THE AUTHOR

...view details