ಕರ್ನಾಟಕ

karnataka

ETV Bharat / bharat

30 ಲಕ್ಷ ಲಸಿಕೆ ಸಿಗದಿದ್ರೆ 18-44 ವಯೋಮಾನದವ್ರಿಗೆ ವ್ಯಾಕ್ಸಿನೇಷನ್​ ಇಲ್ಲ: ಮಹಾರಾಷ್ಟ್ರ ಆರೋಗ್ಯ ಸಚಿವ - ವೈಯಲ್ಸ್‌

ಕನಿಷ್ಠ ಐದು ದಿನಗಳವರೆಗೆ ಸಾಕಾಗುವಷ್ಟು ಲಸಿಕೆ ಸಂಗ್ರಹವಿದ್ದರೆ ಮಾತ್ರ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ.

Maharashtra health minister Rajesh Tope
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ

By

Published : Apr 30, 2021, 10:24 AM IST

ಮುಂಬೈ: ಮಹಾರಾಷ್ಟ್ರಕ್ಕೆ ಕೋವಿಡ್​ ಲಸಿಕೆಯ 25 ರಿಂದ 30 ಲಕ್ಷ ವಯಲ್ಸ್‌ (ಬಾಟಲಿಗಳು) ಪೂರೈಕೆಯಾಗದಿದ್ದರೆ ಮೇ 1ರಿಂದ 18-44 ವಯೋಮಾನದ ಜನರಿಗೆ ವ್ಯಾಕ್ಸಿನೇಷನ್ ಆರಂಭಿಸುವುದಿಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.

ನಾಳೆಯಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಕೋವಿನ್ ಅಪ್ಲಿಕೇಶನ್‌ನಲ್ಲಿ ನೋಂದಣಿ ಮುಕ್ತವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತೋಪೆ, ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು ಕನಿಷ್ಠ ಐದು ದಿನಗಳವರೆಗೆ ಸಾಕಾಗುವಷ್ಟು ಲಸಿಕೆ ಸಂಗ್ರಹವಿರಬೇಕು. ರಾಜ್ಯಕ್ಕೆ 25 ಲಕ್ಷದಿಂದ 30 ಲಕ್ಷ ವೈಯಲ್ಸ್‌ ಸಿಗದಿದ್ದರೆ 18-44 ವಯೋಮಾನದವರಿಗಾಗಿ ವ್ಯಾಕ್ಸಿನೇಷನ್ ಪ್ರಾರಂಭಿಸುವುದಿಲ್ಲ. ಸಮರ್ಪಕ ಲಸಿಕೆಗಳನ್ನು ನೀಡಿದರೆ ಪ್ರತಿದಿನ ಎಂಟು ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಸಾಮರ್ಥ್ಯ ಮಹಾರಾಷ್ಟ್ರಕ್ಕಿದೆ ಎಂದರು.

ಇದನ್ನೂ ಓದಿ: 24 ಗಂಟೆಗಳಲ್ಲಿ ದೇಶದಲ್ಲಿ 3.86 ಲಕ್ಷ ಸೋಂಕಿತರು ಪತ್ತೆ, 3,498 ಮಂದಿ ಸಾವು

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯ ಕೊರತೆಯ ಬಗ್ಗೆ ತಿಳಿಸಿರುವ ಅವರು, ಡೋಸ್​ಗಳ ಕೊರತೆಯಿಂದಾಗಿ ನಾವು ಅನೇಕ ಸಂದರ್ಭಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಸ್ಥಗಿತಗೊಳಿಸಬೇಕಾಯಿತು. ಲಸಿಕೆ ಖರೀದಿಯ ಮೊತ್ತವನ್ನು ಕೇವಲ ಒಂದು ಚೆಕ್ ಮೂಲಕ ಪಾವತಿಸಲು ಸಿದ್ಧರಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಮಗೆ ( ರಾಜ್ಯ ಸಂಪುಟ) ಮತ್ತು ಲಸಿಕೆ ತಯಾರಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಸುಗಮವಾಗಿ ಮತ್ತು ನಿರಂತರವಾಗಿ ಲಸಿಕೆ ಪೂರೈಸುವ ಭರವಸೆಯೊಂದೇ ಅವರಿಗೆ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ABOUT THE AUTHOR

...view details