ತಿರುವನಂತಪುರ/ ಕೇರಳ:ಸೋಮವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ಮಂಡಿಸಿದ ಲಾಕ್ಡೌನ್ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಮತ್ತು ಸಿಪಿಎಂ ಮತ್ತು ಬಿಜೆಪಿ ನಾಯಕರು ಸಮ್ಮತಿಸಿದರಾದರೂ ಕೊನೆಯಲ್ಲಿ ಸಂಪೂರ್ಣ ಲಾಕ್ಡೌನ್ ಬೇಡ ಹಾಗೂ ಶನಿವಾರ ಮತ್ತು ಭಾನುವಾರ ಮಿನಿ ಲಾಕ್‌ಡೌನ್‌ಗಳನ್ನು ಮುಂದುವರಿಸಲು ಸಭೆ ನಿರ್ಧರಿಸಿತು.