ನವದೆಹಲಿ:ದೇಶದ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದ್ದು, "ಚೇತರಿಕೆ"ಯ ಯಾವುದೇ ಲಕ್ಷಣಗಳಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಬುಧವಾರ ಹೇಳಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಶೇ.4.1 ರ ಬೆಳವಣಿಗೆ ದರವನ್ನು ತೋರಿಸುವ ಮೂಲಕ 2021-22ನೇ ಸಾಲಿನಲ್ಲಿ ಒಟ್ಟಾರೆ ಜಿಡಿಪಿ ಶೇ.8.7ರ ಬೆಳವಣಿಗೆಯ ವರದಿ ಆಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2021-22ರಲ್ಲಿ 20.1, 8.4, 5.4 ಮತ್ತು 4.1 ರಷ್ಟು ತ್ರೈಮಾಸಿಕ ಬೆಳವಣಿಗೆ ದರಗಳು ಅತ್ಯಂತ ಗಮನಾರ್ಹವಾದ ಗ್ರಾಫ್ ಆಗಿದೆ. ಆ ಗ್ರಾಫ್ ಎಲ್ಲವನ್ನೂ ಹೇಳುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ದುರ್ಬಲಗೊಳ್ಳುತ್ತಿದೆ ಮತ್ತು ಚೇತರಿಕೆಯ ಯಾವುದೇ ಲಕ್ಷಣಗಳಿಲ್ಲ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.