ನವದೆಹಲಿ:ದೇಶದಲ್ಲಿ ಬಿಟ್ಕಾಯಿನ್ ಅನ್ನು ಕರೆನ್ಸಿಯಾಗಿ ರೂಪಾಂತರಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಇಂದು ಸ್ಪಷ್ಟಪಡಿಸಿದರು.
ಬಿಟ್ಕಾಯಿನ್ ಕರೆನ್ಸಿಯಾಗಿ ರೂಪಾಂತರಿಸಲ್ಲ: ಸಚಿವೆ ನಿರ್ಮಲಾ ಸೀತಾರಾಮನ್ - ಬಿಟ್ಕಾಯಿನ್ ಕರೆನ್ಸಿಯಾಗಿ ರೂಪಾಂತರಿಸಲ್ಲ
ಬಿಟ್ಕಾಯಿನ್ ಅನ್ನು ಕರೆನ್ಸಿಯಾಗಿ ರೂಪಾಂತರಿಸುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಬಿಟ್ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ದೇಶದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದು, ಇದನ್ನು ಕರೆನ್ಸಿಯನ್ನಾಗಿ ಮಾಡುವ ಪ್ರಸ್ತಾಪ ಇದೆಯೇ ಎಂದು ಸದನದಲ್ಲಿ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅಂತಹ ಯಾವುದೇ ಪ್ರಸ್ತಾಪವನ್ನು ಸರ್ಕಾರ ಹೊಂದಿಲ್ಲ. ಅಲ್ಲದೇ ಈ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುತ್ತಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದರು.