ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಎಲ್ಲಾ ಸೇವೆಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸ್ಪಷ್ಟನೆ ನೀಡಿದೆ.
ಆಧಾರ್-ಪ್ಯಾನ್/ಇಪಿಎಫ್ಒ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಗಳಿಲ್ಲ ಎಂದು ದೃಢಪಡಿಸಿದೆ. ಕಳೆದ ವಾರ ಯುಐಡಿಎಐನಲ್ಲಿ ಕೆಲ ತಾಂತ್ರಿಕ ದೋಷಗಳುಂಟಾಗಿವೆ ಎಂಬ ವದಂತಿಗಳು ಹರಿದಾಡಿದ್ದವು.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಯುಐಡಿಎಐ ತನ್ನ ವ್ಯವಸ್ಥೆಯಲ್ಲಿ ಕಳೆದ ವಾರದಿಂದ ಹಂತ ಹಂತವಾಗಿ ಅಗತ್ಯ ಭದ್ರತಾ ಅಪ್ಗ್ರೇಡ್ಗಳನ್ನು ಮಾಡುತ್ತಿದೆ. ಕೆಲವು ಮಧ್ಯಂತರ ಸೇವಾ ಅಡಚಣೆಗಳು ದಾಖಲಾತಿಯಲ್ಲಿ ಮಾತ್ರ ವರದಿಯಾಗಿದೆ ಎಂದು ಉಲ್ಲೇಖಿಸಿದೆ.
ಉದ್ಯೋಗಿಗಳ ಇಪಿಎಫ್ಒ, ಪಾನ್ ಜತೆಗೆ ಆಧಾರ್ ಲಿಂಕ್ ಮಾಡಲು ನೀಡಿದ್ದ ಅಂತಿಮ ಕಾಲಾವಕಾಶ ಸಮೀಪಿಸುತ್ತಿರುವ ಹಿನ್ನೆಲೆ UIDAI ಸರಿಯಿಲ್ಲ ಎಂಬ ವದಂತಿಗಳು ಹರಿದಾಡಿವೆ ಎನ್ನಲಾಗಿದೆ.
ಅಲ್ಲದೆ, ಯುಐಡಿಎಐ ವ್ಯವಸ್ಥೆಯು ಸ್ಥಗಿತಗೊಂಡಿದ್ದರೂ ಸಹ, ಜನರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದೆ.