ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಶಿವಸೇನೆಯ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂದೆ ಬಳಗ ಇದೀಗ ಭಾರತೀಯ ಜನತಾ ಪಾರ್ಟಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ಆದರೆ, ಶಿವಸೇನೆಯ ಚಿಹ್ನೆಯಾಗಿರುವ ಬಿಲ್ಲು, ಬಾಣ ಯಾವ ಬಣದ ಪಾಲಾಗಲಿದೆ ಎಂಬುದು ಎಲ್ಲರಲ್ಲೂ ಹುಟ್ಟಿರುವ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
ಶಿವಸೇನೆಯಿಂದ ಬಿಲ್ಲು, ಬಾಣ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅದು ಶಿವಸೇನೆಗೆ ಸೇರಿದ್ದು. ಏನೇ ಆಗಲಿ ನಾವು ಹಿಂದೆ ಸರಿಯುವುದಿಲ್ಲ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಪಕ್ಷ ಹೊಸ ಚಿಹ್ನೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದಿದ್ದಾರೆ. ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿರುವ ಏಕನಾಥ್ ಶಿಂದೆ ಬಳಗಕ್ಕೆ ಶಿವಸೇನೆಯ ಬಿಲ್ಲು, ಬಾಣ ಚಿಹ್ನೆ ಸಿಗಲಿದೆ ಎಂಬು ಮಾತು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ.
ಇದನ್ನೂ ಓದಿರಿ:ಶಿಂಜೋ ಅಬೆ ಹತ್ಯೆ: ಗೌರವಾರ್ಥವಾಗಿ ನಾಳೆ ಭಾರತದಲ್ಲಿ ಶೋಕಾಚರಣೆ ಘೋಷಿಸಿದ ಮೋದಿ