ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಬಾಲಕ, ಬಾಲಕಿಯರ ಶಾಲೆಗಳ ರದ್ದುಗೊಳಿಸಲು ಆದೇಶ

2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಬಾಲಕರು ಮತ್ತು ಬಾಲಕಿಯರಿಗಾಗಿಯೇ ಇರುವ ಶಾಲೆಗಳನ್ನು ಮುಚ್ಚುವಂತೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಕ್ರವಾರ ಆದೇಶಿಸಿದೆ.

Kerala
ಸಾಂದರ್ಭಿಕ ಚಿತ್ರ

By

Published : Jul 22, 2022, 2:27 PM IST

ತಿರುವನಂತಪುರಂ:ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 2023-24ರ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಸಹ ಶಿಕ್ಷಣ ನೀಡುವ ಮಿಶ್ರ ಶಾಲೆಗಳು ಮಾತ್ರ ಇರಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಒಬ್ಬ ವ್ಯಕ್ತಿ ಸಲ್ಲಿಸಿದ ಮನವಿಯ ಆಧಾರದ ಮೇಲೆ, ಸಮಿತಿ ಪ್ರಧಾನ ಕಾರ್ಯದರ್ಶಿ (ಸಾಮಾನ್ಯ ಶಿಕ್ಷಣ) ಮತ್ತು ಸಾರ್ವಜನಿಕ ಶಿಕ್ಷಣದ ನಿರ್ದೇಶಕರು ಮತ್ತು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸಲು ಆದೇಶಿಸಿದೆ.

ಸಹ-ಶಿಕ್ಷಣ ಪದ್ಧತಿಯ ಅನುಷ್ಠಾನದ ಕುರಿತು ವಿವರವಾದ ವರದಿಯನ್ನು 90 ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸಬೇಕು. ಆದೇಶದಂತೆ. "ರಾಜ್ಯದಲ್ಲಿ ಬಾಲಕಿಯರ ಮತ್ತು ಬಾಲಕರ ವಿಶೇಷ ಶಾಲೆಗಳನ್ನು ರದ್ದುಪಡಿಸಲು ಮತ್ತು 2023-24 ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಂಸ್ಥೆಗಳಲ್ಲಿ ಸಹ-ಶಿಕ್ಷಣವನ್ನು ಜಾರಿಗೊಳಿಸಲು ಅವರಿಂದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು" ಎಂದು ಅದು ಹೇಳಿದೆ.

ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ವಲಯಗಳಲ್ಲಿ ಒಟ್ಟು 280 ಬಾಲಕಿಯರ ಶಾಲೆಗಳು ಮತ್ತು 164 ಬಾಲಕರ ಶಾಲೆಗಳಿವೆ. ಈ ಶಾಲೆಗಳನ್ನು ಮಿಶ್ರ ಶಾಲೆಗಳನ್ನಾಗಿ ಮಾಡಬೇಕು. ಅಂತಹ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಶೌಚಾಲಯ ಸೇರಿದಂತೆ ಶಾಲೆಗಳ ಭೌತಿಕ ಸ್ಥಿತಿ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಹಶಿಕ್ಷಣದ ಅಗತ್ಯತೆಯ ಬಗ್ಗೆ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ:ಸಿಬಿಎಸ್​ಸಿ 12 ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರದ್ದೇ ಮೇಲುಗೈ

ABOUT THE AUTHOR

...view details