ಮುಂಬೈ(ಮಹಾರಾಷ್ಟ್ರ):ಕೊರೊನಾ ಮೂರನೇ ಅಲೆ ಸಂಪೂರ್ಣವಾಗಿ ಹತೋಟಿಗೆ ಬಂದಿದೆ. ಹೀಗಾಗಿ, ಶನಿವಾರದಿಂದ ಕೋವಿಡ್ ಮೇಲಿನ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಇದರ ಜೊತೆಗೆ ಮಾಸ್ಕ್ ಹಾಕಿಕೊಳ್ಳುವುದು ಕೂಡಾ ಕಡ್ಡಾಯವಲ್ಲ ಎಂದಿದೆ.
ಏಪ್ರಿಲ್ 2ರಿಂದ ಮಹಾರಾಷ್ಟ್ರದಲ್ಲಿ ಎಲ್ಲ ಕೋವಿಡ್ ನಿರ್ಬಂಧ ತೆರವು; ಮಾಸ್ಕ್ ಕಡ್ಡಾಯವಿಲ್ಲ - ಮಹಾರಾಷ್ಟ್ರದಲ್ಲಿ ಮಾಸ್ಕ್ ಕಡ್ಡಾಯವಲ್ಲ
ಮಹಾಮಾರಿ ಕೊರೊನಾ ವೈರಸ್ ಹತೋಟಿಗೆ ಬಂದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಏಪ್ರಿಲ್ 2ರಿಂದ ಕೋವಿಡ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ. ಹೀಗಾಗಿ ನಿರ್ಬಂಧಗಳನ್ನು ಹಿಂಪಡೆದುಕೊಳ್ಳುವುದಾಗಿ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಕೋವಿಡ್ ಮೇಲಿನ ನಿರ್ಬಂಧ ಹಿಂಪಡೆದುಕೊಳ್ಳುತ್ತಿರುವುದು ಜನರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬಾರದು ಎಂಬ ಉದ್ದೇಶದಿಂದ ಅಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಕಬ್ಬಿಣದ ಮೊಳೆಗಳ ಮೇಲೆ ಬರಿಗಾಲಲ್ಲೇ ಕೂಚಿಪುಡಿ ನೃತ್ಯ!: ವಿಶ್ವದಾಖಲೆ ಬರೆದ ಉಪನ್ಯಾಸಕಿ