ಭೋಪಾಲ್(ಮಧ್ಯಪ್ರದೇಶ): ಯಾವುದೇ ಹುಡುಗಿ ರಾಹುಲ್ ಗಾಂಧಿಯನ್ನು ಮದುವೆಯಾಗಲು ಇಷ್ಟಪಡಲ್ಲ. ಆದರೆ ಅವರು ದೇಶದ ಪ್ರಧಾನಿಯಾಗುವ ಕನಸು ಕಾಣ್ತಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಇತ್ತೀಚೆಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಹುಲ್ ಗಾಂಧಿಯನ್ನಿಟ್ಟುಕೊಂಡು ಚಿಕ್ಕ ಮಕ್ಕಳೂ ಗೇಲಿ ಮಾಡ್ತಾರೆ. ಆದರೆ ಅವರು ದೇಶದ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಪ್ರಗ್ಯಾ ಸಿಂಗ್ ವ್ಯಂಗ್ಯ ಆರ್ಥಿಕತೆ ಮತ್ತು ರೈತರು ಪ್ರಬಲವಾಗಿದ್ದರೆ ಚೀನಾ ಭಾರತೀಯ ಭೂಪ್ರದೇಶದೊಳಗೆ ಹೆಜ್ಜೆ ಹಾಕುವ ಧೈರ್ಯ ಮಾಡುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾಧ್ವಿ, ಪ್ರತಿಯೊಬ್ಬರು ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಆದರೆ ಅದಕ್ಕೆ ಸಮರ್ಥರಾಗಿರಬೇಕು. ರೈತರು ಮತ್ತು ಸೈನಿಕರು ತಮ್ಮದೇ ಆದ ಪಾತ್ರ ಹೊಂದಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಜ್ಞಾನ ಅಥವಾ ಸಂಸ್ಕೃತಿಯನ್ನು ಹೊಂದಿಲ್ಲ. ಆದರೆ ಅಂತಹ ಧರ್ಮದ್ರೋಹಿ ಹೇಳಿಕೆ ನೀಡುತ್ತಾರೆ ಎಂದರು. ನಾನು ರಾಹುಲ್ ಗಾಂಧಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಅದರಲ್ಲಿ ನೀವು ಎಂತಹ ಹುಡುಗಿಯನ್ನು ಮದುವೆಯಾಗುತ್ತೀರಿ ಎಂದು ಕೇಳಿ, ಗೇಲಿ ಮಾಡಿದ್ದರು ಎಂದರು.