ಕರ್ನಾಟಕ

karnataka

ETV Bharat / bharat

ಆನ್​​ಲೈನ್ ಪಿಜ್ಜಾ ಆರ್ಡರ್ ಮಾಡಿದ್ದ ಭಾರತದ 10 ಲಕ್ಷ ಜನರ ಕ್ರೆಡಿಟ್ ಕಾರ್ಡ್ ವಿವರ ಸೋರಿಕೆ ಆರೋಪ - ಸೈಬರ್ ಭದ್ರತಾ ಸಂಸ್ಥೆ ಹಡ್ಸನ್ ರಾಕ್‌ನ ಸಿಟಿಒ ಆಗಿರುವ ಅಲೋನ್ ಗಾಲ್

ನಾವು ಯಾವುದೇ ರೀತಿಯ ಹಣಕಾಸು ವ್ಯವಹಾರ ಸಂಬಂಧಿಯ ಮಾಹಿತಿ ನಮ್ಮಲ್ಲಿ ದಾಖಲು ಮಾಡಿಕೊಳ್ಳುವುದಿಲ್ಲ. ಇದು ನಮ್ಮ ನೀತಿಯಲ್ಲಿಯೂ ಉಲ್ಲೇಖವಿದೆ ಎಂದಿದ್ದಾರೆ. ಆದರೆ, ಅಲೋನ್ ಗಾಲ್ ಹೇಳುವಂತೆ 180,000,000 ಆರ್ಡರ್​​ನ ಮಾಹಿತಿ ಸೇರಿ, ವ್ಯಕ್ತಿಯ ಹೆಸರು, ವಿಳಾಸ, ಇ-ಮೇಲ್, ಪೇಮೆಂಟ್ ಮಾಹಿತಿ ಸೋರಿಕೆಯಾಗಿದೆ..

no-financial-data-of-dominos-india-users-leaked-jubilant
ಭಾರತದ 10 ಲಕ್ಷ ಜನರ ಕ್ರೆಡಿಟ್ ಕಾರ್ಡ್ ವಿವರ ಸೋರಿಕೆ ಆರೋಪ

By

Published : Apr 20, 2021, 7:56 PM IST

ನವದೆಹಲಿ :ದೇಶದ ತನ್ನ ಬಳಕೆದಾರರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಯಾವುದೇ ಹಣಕಾಸಿನ ಮಾಹಿತಿಯು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿಲ್ಲ ಎಂದು ಭಾರತದಲ್ಲಿ ಡೋಮಿನೊಸ್ ಪಿಜ್ಜಾಗೆ ಫ್ರ್ಯಾಂಚೈಸಿ ಹೊಂದಿರುವ ಜ್ಯುಬಿಲೆಂಟ್ ಫುಡ್‌ವರ್ಕ್ಸ್ ಮಾಹಿತಿ ನೀಡಿದೆ.

ಆನ್‌ಲೈನ್‌ನಲ್ಲಿ ಡೋಮಿನೊಸ್ ಪಿಜ್ಜಾ ಖರೀದಿಸಿದ ಸುಮಾರು 10 ಲಕ್ಷ ಜನರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಡಾರ್ಕ್ ವೆಬ್‌ನಲ್ಲಿ 4 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಸೈಬರ್ ಭದ್ರತಾ ಸಂಸ್ಥೆ ಹಡ್ಸನ್ ರಾಕ್‌ನ ಸಿಟಿಒ ಆಗಿರುವ ಅಲೋನ್ ಗಾಲ್ ಆರೋಪಿಸಿದ್ದರು.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಜ್ಯುಬಿಲೆಂಟ್ ವಕ್ತಾರ, ಈ ಹಿಂದೆ ಕಂಪನಿ ಭದ್ರತೆಯ ವಿಚಾರದಲ್ಲಿ ಸಮಸ್ಯೆ ಎದುರಿಸಿದೆ ಎಂದಿದ್ದಾರೆ. ಆದರೆ, ಯಾವುದೇ ವ್ಯಕ್ತಿಯ ಹಣಕಾಸಿನ ಮಾಹಿತಿಗೆ ಸಂಬಂಧಿಸಿದ ಯಾವುದೇ ಡೇಟಾವು ಕಳುವಾಗಿಲ್ಲ ಮತ್ತು ಘಟನೆಯು ಯಾವುದೇ ವ್ಯವಹಾರಕ್ಕೆ ಅಡ್ಡಿಯಾಗಿಲ್ಲ.

ನಾವು ಯಾವುದೇ ರೀತಿಯ ಹಣಕಾಸು ವ್ಯವಹಾರ ಸಂಬಂಧಿಯ ಮಾಹಿತಿ ನಮ್ಮಲ್ಲಿ ದಾಖಲು ಮಾಡಿಕೊಳ್ಳುವುದಿಲ್ಲ. ಇದು ನಮ್ಮ ನೀತಿಯಲ್ಲಿಯೂ ಉಲ್ಲೇಖವಿದೆ ಎಂದಿದ್ದಾರೆ. ಆದರೆ, ಅಲೋನ್ ಗಾಲ್ ಹೇಳುವಂತೆ 180,000,000 ಆರ್ಡರ್​​ನ ಮಾಹಿತಿ ಸೇರಿ, ವ್ಯಕ್ತಿಯ ಹೆಸರು, ವಿಳಾಸ, ಇ-ಮೇಲ್, ಪೇಮೆಂಟ್ ಮಾಹಿತಿ ಸೋರಿಕೆಯಾಗಿದೆ ಎಂದಿದ್ದಾರೆ.

ABOUT THE AUTHOR

...view details