ನವದೆಹಲಿ: ಜುಲೈ 31 ರ ಅಂತಿಮ ದಿನಾಂಕದೊಳಗೆ ಹೆಚ್ಚಿನ ರಿಟರ್ನ್ಸ್ ಬರುವ ನಿರೀಕ್ಷೆಯಿರುವುದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ತಿಂಗಳ ಕೊನೆಯ ದಿನದಂದು. ಆದಾಯ ತೆರಿಗೆ ಇಲಾಖೆ ಕನಿಷ್ಠ 1 ಕೋಟಿ ರಿಟರ್ನ್ಸ್ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ, ನಿಗದಿತ ಕೊನೆಯ ದಿನಾಂಕದಂದು ಸರ್ಕಾರವು 50 ಲಕ್ಷಕ್ಕೂ ಹೆಚ್ಚು ರಿಟರ್ನ್ಸ್‌ಗಳನ್ನು ಸ್ವೀಕರಿಸಿತ್ತು.
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಸರ್ಕಾರವು ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಸಲು ಗಡುವನ್ನು ಕಾಲಕಾಲಕ್ಕೆ ವಿಸ್ತರಿಸಿತ್ತು ಎಂಬುದನ್ನು ಗಮನಿಸಬಹುದು. ಆದರೆ ಈ ಬಾರಿ ಗಡುವು ವಿಸ್ತರಣೆ ಮಾಡದಿರುವ ಇಲಾಖೆ ನಿರ್ಧರಿಸಿದೆ. 10,36,43,750 ವೈಯಕ್ತಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಇದುವರೆಗೂ 3 ಕೋಟಿಗೂ ಹೆಚ್ಚು ಜನರು ತಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ ಎಂದು ಇಲಾಖೆ ಟ್ವೀಟ್ ಮೂಲಕ ದೃಢ ಪಡಿಸಿದೆ.
ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗಳು ಹೀಗಿವೆ:ಐಟಿ ರಿಟರ್ನ್ಸ್ ಸಲ್ಲಿಕೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕಾಲಕಾಲಕ್ಕೆ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತೆರಿಗೆ-ವಿನಾಯತಿ ಮಿತಿಗಿಂತ ಹೆಚ್ಚು ಆದಾಯ ಗಳಿಸಿದವರು ನಿಯಮಗಳ ಪ್ರಕಾರ ನಿಗದಿತ ಐಟಿಆರ್ ನಮೂನೆಯಲ್ಲಿ ರಿಟರ್ನ್ಸ್ ಸಲ್ಲಿಸಬೇಕು.
ಇದರ ಫಾರ್ಮ್‌ಗಳು ಈಗಾಗಲೇ ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ಲಭ್ಯವಿವೆ. ರಿಟರ್ನ್‌ಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಮೊದಲೇ ತುಂಬಿದ ಫಾರ್ಮ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗುತ್ತದೆ. ಅದಕ್ಕೂ ಮೊದಲು, ನೀವು ನಿಮ್ಮ ಆದಾಯದ ಎಲ್ಲ ಪುರಾವೆಗಳನ್ನು ಸಂಗ್ರಹಿಸಬೇಕು ಮತ್ತು ಅವುಗಳನ್ನು ಏನು ಮಾಡಬೇಕೆಂಬುದನ್ನು ತಿಳಿಯಬೇಕು.
ಜುಲೈ 31 ನೆನಪಿಡಿ: 2022ರ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಅಂತಿಮ ದಿನಾಂಕ ಹತ್ತಿರದಲ್ಲಿದೆ. ಪ್ರತಿಯೊಬ್ಬ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಕೊನೆಯ ದಿನಾಂಕದ ಮೊದಲು ಸಲ್ಲಿಸುವುದು ಮುಖ್ಯ. ಹಾಗೆ ಮಾಡಲು ವಿಫಲವಾದರೆ ದಂಡ ಪಾವತಿಸಬೇಕಾಗುತ್ತದೆ. ಹಣಕಾಸು ವರ್ಷ 2021-22 ರಲ್ಲಿ ಹೆಚ್ಚಿನ ತೆರಿಗೆದಾರರಿಗೆ ITR ಅನ್ನು ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ.
ಫಾರ್ಮ್ 16: ಇದು ಆದಾಯ ತೆರಿಗೆ ನಮೂನೆಯಾಗಿದ್ದು, ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಡಿತಗೊಳಿಸಿದ ತೆರಿಗೆಯ ಮಾಹಿತಿಯನ್ನು ನೀಡಲು ಬಳಸಲಾಗುತ್ತದೆ. ಉದಾಹರಣೆಗೆ, ಕಳೆದ ಹಣಕಾಸು ವರ್ಷದಲ್ಲಿ (2021-22) ನಿಮ್ಮ ಆದಾಯವು ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ಕಡಿತಗೊಳಿಸಿದ ತೆರಿಗೆಯ ವಿವರಗಳನ್ನು ಮತ್ತು ವರ್ಷಕ್ಕೆ ನೀವು ಕ್ಲೈಮ್ ಮಾಡಿದ ವಿನಾಯಿತಿಗಳನ್ನು ನಂತರ ಫಾರ್ಮ್ ತೋರಿಸುತ್ತದೆ. ಈಗಾಗಲೇ, ಕೆಲವು ಕಂಪನಿಗಳು ಫಾರ್ಮ್ 16 ಬಿಡುಗಡೆ ಮಾಡಿದ್ದರೆ, ಇತರರು ಶೀಘ್ರದಲ್ಲೇ ಅವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಫಾರ್ಮ್ 16 ರಲ್ಲಿ ಉಲ್ಲೇಖಿಸಲಾದ ಆದಾಯವು ಈಗಾಗಲೇ ತುಂಬಿದ ಐಟಿಆರ್ ಮೊತ್ತಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ನೀವು ಪರಿಶೀಲಿಸಬೇಕು.
ಫಾರ್ಮ್ 16 ಎ: ಇದು ಸಂಬಳದ ಹೊರತಾದ ಆದಾಯದ ಮೇಲೆ ವಿಧಿಸಲಾದ ಟಿಡಿಎಸ್ ಅನ್ನು ತೋರಿಸುತ್ತದೆ. ಉದಾಹರಣೆಗೆ, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿಯ ಮೂಲಕ ಗಳಿಕೆಯು ರೂ. 40,000 ಕ್ಕಿಂತ ಹೆಚ್ಚಿದ್ದರೆ, ಅದು TDS ಗೆ ಒಳಪಡುತ್ತದೆ. ಅಂಥ ಸಂದರ್ಭಗಳಲ್ಲಿ, ಫಾರ್ಮ್ 16 ಎ ನೀಡಲಾಗುತ್ತದೆ. ಡಿವಿಡೆಂಡ್ ಪಾವತಿಯು ರೂ. 5,000 ಮೀರಿದರೆ ಮ್ಯೂಚುವಲ್ ಫಂಡ್ ಕಂಪನಿಗಳು ಈ ಫಾರ್ಮ್ ಅನ್ನು ನೀಡುತ್ತವೆ.