ಕರ್ನಾಟಕ

karnataka

ETV Bharat / bharat

ವಿಚ್ಛೇದನ ಅಂತೇನಿಲ್ಲ, ಕೇವಲ ಕೌಟುಂಬಿಕ ಕಲಹ ಅಷ್ಟೇ: ನಟ ಧನುಷ್ ತಂದೆ

ದಂಪತಿ ಕೌಟುಂಬಿಕ ಕಲಹ ಹೊಂದಿದ್ದಾರೆ, ಇದು ವಿವಾಹಿತ ದಂಪತಿಗಳಲ್ಲಿ ಸಾಮಾನ್ಯವಾಗಿದೆ ಎಂದು ಧನುಷ್​ ತಂದೆ ಹೇಳಿದ್ದಾರೆ.

ವಿಚ್ಛೇದನ ಅಂತೇನಿಲ್ಲ, ಕೇವಲ ಕೌಟುಂಬಿಕ ಕಲಹ ಅಷ್ಟೇ
ವಿಚ್ಛೇದನ ಅಂತೇನಿಲ್ಲ, ಕೇವಲ ಕೌಟುಂಬಿಕ ಕಲಹ ಅಷ್ಟೇ

By

Published : Jan 21, 2022, 12:59 AM IST

Updated : Jan 21, 2022, 6:34 AM IST

ಚೆನ್ನೈ: ನಟ ಧನುಷ್ ತಂದೆ ಕಸ್ತೂರಿರಾಜ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ವಿಚ್ಛೇದನದ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.

ದಂಪತಿ ಕೌಟುಂಬಿಕ ಕಲಹ ಹೊಂದಿದ್ದಾರೆ, ಇದು ವಿವಾಹಿತ ದಂಪತಿಗಳಲ್ಲಿ ಸಾಮಾನ್ಯವಾಗಿದೆ. ಅವರು ಈಗ ಚೆನ್ನೈನಲ್ಲಿ ಇಲ್ಲ ಹೈದರಾಬಾದ್‌ನಲ್ಲಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿ ಸಲಹೆಯನ್ನೂ ನೀಡಿದ್ದೇನೆ ಎಂದಿದ್ದಾರೆ.

ಜಾಹೀರಾತು:- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನುಷ್ ಮತ್ತು ಐಶ್ವರ್ಯ ಅವರು ಪ್ರತ್ಯೇಕತೆ ಬಗ್ಗೆ ಮೊನ್ನೆಯಷ್ಟೇ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದರು.

ಹದಿನೆಂಟು ವರ್ಷಗಳ ವರೆಗೆ ಸ್ನೇಹಿತರು, ದಂಪತಿ, ಪೋಷಕರು ಮತ್ತು ಪರಸ್ಪರ ಹಿತೈಷಿಗಳಾಗಿ ಒಟ್ಟಿಗೆ ಇದ್ದೆವು. ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡಿ. ಓಂ ನಮ ಶಿವಾಯ! ಎಂದು ಧನುಷ್​ ಟ್ವೀಟ್​ ಮಾಡಿದ್ದರು.

Last Updated : Jan 21, 2022, 6:34 AM IST

For All Latest Updates

ABOUT THE AUTHOR

...view details