ಕರ್ನಾಟಕ

karnataka

ಆಧಾರ್​ ಇಲ್ಲವೆಂದು ಕೊರೊನಾ ಲಸಿಕೆ, ಚಿಕಿತ್ಸೆ, ಔಷಧಿ ನಿರಾಕರಿಸುವಂತಿಲ್ಲ: UIDAI ಸ್ಪಷ್ಟನೆ

By

Published : May 16, 2021, 4:07 AM IST

ಯಾವುದೇ ಅಗತ್ಯ ಸೇವೆಯನ್ನು ನಿರಾಕರಿಸುವ ನೆಪವಾಗಿ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಕೋವಿಡ್​-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ತೀವ್ರತೆ ಗಮನದಲ್ಲಿ ಇಟ್ಟುಕೊಂಡು ಪ್ರಾಧಿಕಾರ ತನ್ನ ನಿರ್ಧಾರ ತಿಳಿಸಿದೆ. ದೇಶದ ಯಾವುದೇ ಪ್ರದೇಶದ ಪ್ರಜೆ ಆಧಾರ್ ಹೊಂದಿಲ್ಲದಿದ್ದರೆ, ಅವನಿಗೆ ಆಧಾರ್ ಕಾಯ್ದೆಯ ಪ್ರಕಾರ ಅಗತ್ಯ ಸೇವೆಗಳನ್ನು ನಿರಾಕರಿಸಬಾರದು.

UIDAI
UIDAI

ನವದೆಹಲಿ: ಆಧಾರ್ ಇಲ್ಲದ ಕಾರಣ ಯಾರಿಗೂ ಲಸಿಕೆ, ಔಷಧಿ, ಆಸ್ಪತ್ರೆಗೆ ದಾಖಲು ಅಥವಾ ಚಿಕಿತ್ಸೆ ನಿರಾಕರಿಸಬಾರದು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಯಾವುದೇ ಅಗತ್ಯ ಸೇವೆಯನ್ನು ನಿರಾಕರಿಸುವ ನೆಪವಾಗಿ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಕೋವಿಡ್​-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ತೀವ್ರತೆ ಗಮನದಲ್ಲಿ ಇಟ್ಟುಕೊಂಡು ಪ್ರಾಧಿಕಾರ ಸೂಚಿಸಿದೆ.

ಆಧಾರ್‌ಗಾಗಿ ಸ್ಥಾಪಿತ ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಮೆಕ್ಯಾನಿಸಮ್ (ಇಎಚ್‌ಎಂ) ಇದೆ. 12 ಅಂಕಿಯ ಬಯೋಮೆಟ್ರಿಕ್ ಐಡಿ ಅನುಪಸ್ಥಿತಿಯಲ್ಲಿ ಪ್ರಯೋಜನಾ ಮತ್ತು ಸೇವೆಗಳನ್ನು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಯಾವುದೇ ಪ್ರದೇಶದ ಪ್ರಜೆ ಆಧಾರ್ ಹೊಂದಿಲ್ಲದಿದ್ದರೆ, ಅವನಿಗೆ ಆಧಾರ್ ಕಾಯ್ದೆಯ ಪ್ರಕಾರ ಅಗತ್ಯ ಸೇವೆಗಳನ್ನು ನಿರಾಕರಿಸಬಾರದು.

ಯಾರಿಗೂ ಲಸಿಕೆ, ಔಷಧಿ, ಆಸ್ಪತ್ರೆಗೆ ದಾಖಲು ಅಥವಾ ಆಧಾರ್ ಅಗತ್ಯಕ್ಕಾಗಿ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದಿದೆ. ಯುಐಡಿಎಐ ಕೆಲವು ವರದಿಗಳನ್ನು ಜೋಡಣೆ ಮಾಡಿ ಆಸ್ಪತ್ರೆಯಂತಹ ಕೆಲವು ಅಗತ್ಯ ಸೇವೆಗಳನ್ನು ಆಧಾರ್‌ನ ಅಗತ್ಯಕ್ಕಾಗಿ ನಿವಾಸಿಗಳಿಗೆ ನಿರಾಕರಿಸಲಾಗುತ್ತಿದೆ ಎಂದು ಹೇಳಿದೆ.

ಓರ್ವನಿಗೆ ಆಧಾರ್ ಇಲ್ಲದಿದ್ದರೆ ಅಥವಾ ಕೆಲ ಕಾರಣಾಂತರಗಳಿಂದ ಆಧಾರ್ ಆನ್‌ಲೈನ್ ಪರಿಶೀಲನೆ ಯಶಸ್ವಿಯಾಗದಿದ್ದರೆ, ಸಂಬಂಧಪಟ್ಟ ಸಂಸ್ಥೆ ಅಥವಾ ಇಲಾಖೆಯು ಆಧಾರ್ ಕಾಯ್ದೆ 2016ರಲ್ಲಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಸೇವೆ ಒದಗಿಸಬೇಕಾಗುತ್ತದೆ ಎಂದು ತಿಳಿಸಿದೆ.

For All Latest Updates

ABOUT THE AUTHOR

...view details