ಕೊಟ್ಟಾಯಂ(ಕೇರಳ):ಬನ್, ಐಸ್ಕ್ರೀಂಗಾಗಿ ಮಕ್ಕಳು ಜಗಳ ಮಾಡಿದ್ದು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ಯಾಂಗ್ ಬನ್ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವಾದಿಸಿ ಬೇಕರಿ ಮಾಲೀಕ ಮತ್ತು ಆಕೆಯ ಪತ್ನಿ, ಮಗುವಿನ ಮೇಲೆ ಹಲ್ಲೆ ನಡೆಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ.
ಕೊಟ್ಟಾಯಂನ ವೈಕಂ ಸರ್ಕಾರಿ ಆಸ್ಪತ್ರೆಯ ಬಳಿಯ ಬೇಕರಿಯಲ್ಲಿ ಈ ಹೊಡೆದಾಟ ನಡೆದಿದೆ. 6 ಜನರ ಗ್ಯಾಂಗ್ ಒಂದು ಬೇಕರಿ ಬಂದು ಟೀ ಮತ್ತು ಕ್ರೀಂ ಬನ್ ಆರ್ಡರ್ ಮಾಡಿದೆ. ಈ ವೇಳೆ, ಕ್ರೀಂ ಬನ್ನಲ್ಲಿ ಕ್ರೀಂ ಕಡಿಮೆ ಇದೆ ಎಂದು ವರಾತೆ ತೆಗೆದಿದ್ದಾರೆ. ಇದಲ್ಲದೇ ಬೇಕರಿ ಮಾಲೀಕನ ಮೇಲೆ ಈ ಕುರಿತಾಗಿ ಹಲ್ಲೆ ಮಾಡಿದ್ದಾರೆ.
ಈ ವೇಳೆ ಬೇಕರಿ ಮಾಲೀಕನ ಪತ್ನಿ ಮತ್ತು ಮಗು ತಡೆಯಲು ಬಂದಾಗ ಅವರ ಮೇಲೂ ಗ್ಯಾಂಗ್ ಹಲ್ಲೆ ಮಾಡಿದೆ. ಇದಲ್ಲದೇ, ಅಲ್ಲಿಯೇ ಇದ್ದ ಮತ್ತೋರ್ವ ಗ್ರಾಹಕನೂ ಕೂಡ ಗಲಭೆಯಲ್ಲಿ ಗಾಯಗೊಂಡಿದ್ದಾನೆ. ಗಲಾಟೆಯಲ್ಲಿ ಗ್ಯಾಂಗ್ ಅಂಗಡಿಗೂ ಭಾಗಶಃ ಹಾನಿ ಮಾಡಿದೆ.
ಇದಾದ ಬಳಿಕ ಇಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬೇಕರಿ ಮಾಲೀಕರು ಮತ್ತು ಕುಟುಂಬದವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ಯಾಂಗ್ ದೂರಿದ್ದರೆ, ಕ್ರೀಂ ಬನ್ ವಿಚಾರಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಕರಿ ಮಾಲೀಕ ಕೇಸ್ ದಾಖಲಿಸಿದ್ದಾನೆ. ಪೊಲೀಸರು ಎರಡೂ ಕಡೆಯ ದೂರುಗಳನ್ನು ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಓದಿ:ಗೊಂದಲ ಸೃಷ್ಟಿಸಿದ ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆ ವದಂತಿ: ಮಸೀದಿ ಸಮಿತಿ ವಾದ