ಕರ್ನಾಟಕ

karnataka

ETV Bharat / bharat

Amit Shah: 'ಭ್ರಮೆ'! ಪ್ರತಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಲೋಕಸಭೆಯಲ್ಲಿ ಅಮಿತ್​ ಶಾ ತಿರುಗೇಟು

Amit Shah speech in Lok Sabha: ಸ್ವಾತಂತ್ರ್ಯಾ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಹೆಚ್ಚು ಜನರ ವಿಶ್ವಾಸ ಗಳಿಸಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

"No confidence motion brought only to create a delusion": Amit Shah in Lok Sabha
ಮೋದಿ ಸರ್ಕಾರ ಹೆಚ್ಚಿನ ಜನರ ವಿಶ್ವಾಸ ಗಳಿಸಿದೆ... ಅವಿಶ್ವಾಸ ನಿರ್ಣಯದ ಬಗ್ಗೆ ಪ್ರತಿಪಕ್ಷಗಳಿಗೆ ಅಮಿತ್​ ಶಾ ತಿರುಗೇಟು

By

Published : Aug 9, 2023, 6:41 PM IST

Updated : Aug 9, 2023, 8:10 PM IST

ನವದೆಹಲಿ: ಮಣಿಪುರ ಹಿಂಸಾಚಾರ ವಿಷಯದಲ್ಲಿ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿಗೆ (No confidence motion) ಇಂದು ಕೇಂದ್ರ ಗೃಹ ಅಮಿತ್​ ಶಾ ಲೋಕಸಭೆಯಲ್ಲಿ ಉತ್ತರ ನೀಡಿದರು. "ಸದನದಲ್ಲಿ ಬಹುಮತವಿದ್ದರೂ ಭ್ರಮೆ ಹುಟ್ಟಿಸಲು ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದು ರಾಜಕೀಯಪ್ರೇರಿತ'' ಎಂದರು.

ಇದನ್ನೂ ಓದಿ:Rahul vs Irani: ಸಂಸತ್ತಿನಲ್ಲಿ ರಾಹುಲ್​ ಹೇಳಿಕೆಗೆ ಸ್ಮೃತಿ ಇರಾನಿ ಆಕ್ರೋಶ; ಸಚಿವೆಯನ್ನು ಟೀಕಿಸಿದ ಶಶಿ ತರೂರ್

''ಪ್ರಧಾನಿ ಮೋದಿ ಈ ದೇಶದ ಬಡವರಿಗೆ ಹೊಸ ಭರವಸೆ ನೀಡಿದ್ದಾರೆ. ದೇಶದಲ್ಲಿ ಎಲ್ಲಿಯೂ ಅವಿಶ್ವಾಸದ ಗದ್ದಲವಿಲ್ಲ. ಪ್ರಧಾನಿ ಮತ್ತು ಸರ್ಕಾರದ ಮೇಲೆ ಅವಿಶ್ವಾಸ ಮೂಡಿಬಂದಿಲ್ಲ. ಜನರಿಗೆ ಮೋದಿ ಮೇಲೆ ಸಂಪೂರ್ಣ ನಂಬಿಕೆ ಇದೆ'' ಎಂದು ಅವರು ಹೇಳಿದರು.

"ಮೋದಿ ಒಂದೇ ಒಂದು ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ 17 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜನತೆಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಹೀಗಾಗಿ, ಅವಿಶ್ವಾಸ ನಿರ್ಣಯವು ದೇಶದ ಪ್ರತಿಪಕ್ಷಗಳ ನೈಜ ಸ್ವರೂಪವನ್ನು ತೋರಿಸುತ್ತಿದೆ'' ಎಂದು ಅಮಿತ್ ಶಾ ಟೀಕಿಸಿದರು.

ಇದನ್ನೂ ಓದಿ:ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್​ ವಾಗ್ದಾಳಿ

ಮಣಿಪುರ ಹಿಂಸಾಚಾರ ಕುರಿತು ಅಮಿತ್‌ ಶಾ ಉತ್ತರ: ''ಮಣಿಪುರ ವಿಷಯವನ್ನು ದೇಶದ 130 ಕೋಟಿ ಜನರು ಮುಂದಿಡಲು ನಾನು ಸಿದ್ಧನಿದ್ದೇನೆ. ಹಿಂಸೆ ಯಾಕಾಯ್ತು?, ಏನು ನಡೆಯುತ್ತಿದೆ?, ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ವಿವರಿಸಲು ತಯಾರಿದ್ದೇನೆ. ನಾನು ಸಂವೇದನಾಶೀಲ ವ್ಯಕ್ತಿ. ಹಳೆಯ ವಿಷಯಗಳನ್ನು ರಾಜಕೀಯಕ್ಕೆ ಬಳಸಲು ಸಿದ್ಧನಿಲ್ಲ. ನಿಮ್ಮ ಸಮಯದಲ್ಲೂ ಹಿಂಸಾಚಾರ ಆಗಿತ್ತು, ನಮ್ಮ ಸಮಯದಲ್ಲಿ ಆಗುತ್ತಿದೆ ಎಂದು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಇಂಥದ್ದು ಯುಪಿಎ ಕಾಲದಲ್ಲಿ ನಡೆಯುತ್ತಿತ್ತು. ಆದರೆ, ನಾವು ಸಹಿಸುವುದಿಲ್ಲ. ನಾನು ಹಳೆ ಘಟನೆಗಳನ್ನು ಮಣಿಪುರ ಹಿಂಸಾತ್ಮಕ ಘಟನೆಗಳನ್ನು ಅರಿತುಕೊಳ್ಳುವ ಉದ್ದೇಶದಿಂದಷ್ಟೇ ಉಲ್ಲೇಖ ಮಾಡುತ್ತೇನೆ.''

''ಮಣಿಪುರದಲ್ಲಿ ಕಳೆದ ಸುಮಾರು ಆರೂವರೆ ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸರ್ಕಾರವಿದೆ. ಅಲ್ಲಿಂದ ಮೇ 3ರವರೆಗೆ ಒಂದೇ ದಿನ ದಿನವೂ ಕರ್ಫ್ಯೂ ಹೇರಿಲ್ಲ. ಒಂದು ದಿನವೂ ಬಂದ್​ ಆಗಿಲ್ಲ. ಉಗ್ರವಾದಿ ಹಿಂಸೆಗಳು ತಗ್ಗಿವೆ. ಇದು ಆರು ವರ್ಷಗಳ ಬಿಜೆಪಿ ಸರ್ಕಾರದ ಇತಿಹಾಸ. 2021ರಲ್ಲಿ ನಮ್ಮ ನೆರೆ ರಾಷ್ಟ್ರ ಮಯನ್ಮಾರ್​ನಲ್ಲಿ ಅಧಿಕಾರ ಬದಲಾಯಿತು. ಪ್ರಜಾಪ್ರಭುತ್ವ ಸರ್ಕಾರ ಬಿದ್ದು ಸೇನಾಡಳಿತ ಜಾರಿಗೆ ಬಂತು. ಅಲ್ಲಿನ ಕುಕಿ ಡೆಮಾಕ್ರಟಿಕ್​ ಫ್ರಂಟ್​ ಸ್ವಾತಂತ್ರ್ಯಕ್ಕೆ ಆಂದೋಲನ ಆರಂಭಿಸಿತ್ತು. ಅಲ್ಲಿನ ಸೇನಾಡಳಿತ ಇವರ ವಿರುದ್ಧ ಕ್ರಮಕ್ಕೆ ಮುಂದಾಯಿತು. ಇದರಿಂದ ಮಿಜೋರಾಂ ಹಾಗೂ ಮಣಿಪುರಕ್ಕೆ ಅಲ್ಲಿನ ಹೆಚ್ಚಿನ ಸಂಖ್ಯೆಯ ಕುಕಿಗಳು ಬರಲು ಶುರು ಮಾಡಿದರು. ಗಡಿ ಬೇಲಿ ಇರಲಿಲ್ಲ. ಮಣಿಪುರದ ಜನತೆಯಲ್ಲಿ ಅಸುರಕ್ಷಿತ ಭಾವನೆ ಶುರುವಾಯಿತು.''

''ನಾವು ಇದನ್ನು ಗಮನಿಸಿದೆವು. ಇದೇ ಸಮಯದಲ್ಲಿ ಗೃಹ ಸಚಿವಾಲಯದಲ್ಲಿ 2022ರಲ್ಲಿ ಗಡಿ ತೆರೆಯಲು ಸಾಧ್ಯವಿಲ್ಲ ಎಂದು ನಿರ್ಣಯಕ್ಕೆ ಬಂದೆವು. ಗಡಿ ಮಾಡಬೇಕು, ಬೇಲಿ​ ಮಾಡಬೇಕೆಂದು ನಾವು ತೀರ್ಮಾನ ಮಾಡಿದೆವು. ಈಗಾಗಲೇ 10 ಕಿಮೀ ಗಡಿ ಬೇಲಿ ಪೂರ್ಣಗೊಳಿಸಿದ್ದೇವೆ. 60 ಕಿಮೀ ಬೇಲಿ ಕಾಮಗಾರಿ ಪ್ರಗತಿಯಲ್ಲಿದೆ. 600 ಕಿಮೀ ಸರ್ವೆ ನಡೆಯುತ್ತಿದೆ. ನೀವು 2014ರವರೆಗೆ ಎಂದಿಗೂ ಗಡಿಗೆ ಬೇಲಿ ಹಾಕಿರಲಿಲ್ಲ.''

''ಶರಣಾಗತಿಗಳು ಬಂದಿದ್ದರೆ ಅವರಿಗೆ ಗುರುತಿನ ಚೀಟಿ ನೀಡಲು ಶುರು ಮಾಡಿದೆವು. ಕಣ್ಣಿ ಗುರುತು ಹಾಗೂ ಬೆರಳಚ್ಚು ಪಡೆದೆವು. ಇದರ ನಡುವೆ ಏಪ್ರಿಲ್​ನಲ್ಲಿ ಶರಣಾಗತಿಗಳಿಗೆ ಗ್ರಾಮಗಳನ್ನು ಘೋಷಿಸಲಾಗಿದೆ ಎಂಬ ವದಂತಿ ಹಬ್ಬಿತು. ಇವರು ಇಲ್ಲೇ ಶಾಶ್ವತವಾಗಿ ಉಳಿಯುತ್ತಾರೆ ಎಂಬ ಭಾವನೆ ಕಣಿವೆಯಲ್ಲಿ ಮೂಡಿತು. ಬೆಂಕಿಗೆ ಎಣ್ಣೆ ಸುರಿಯುವಂತೆ ಮಣಿಪುರ ಹೈಕೋರ್ಟ್​ ಸ್ವಯಂ ಆಗಿ ಹಳೆಯ ಪ್ರಕರಣದಲ್ಲಿ ಮೈಥೀಸ್‌ ಬುಡಕಟ್ಟು ಜನಾಂಗದ ಘೋಷಣೆ ಕುರಿತು ಹೇಳಿತು. ಈ ಕುರಿತು ಕೇಂದ್ರ ಸರ್ಕಾರ, ಬುಡಕಟ್ಟು ಆಯೋಗ ಹಾಗೂ ಮಣಿಪುರ ಸರ್ಕಾರದಿಂದ ಯಾವುದೇ ಅಫಿಡವಿಟ್​ ಪಡೆಯದೇ ಈ ಘೋಷಣೆ ಮಾಡಲಾಯಿತು. ಇದರಿಂದ ಅಶಾಂತಿ ಉಂಟಾಯಿತು. ಮೇ 3ರಿಂದ ಇದುವರೆಗೂ ಹಿಂಸಾಚಾರ ನಡೆಯುತ್ತಿದೆ. ನಾನು ಮೈಥೀಸ್‌​ ಮತ್ತು ಕುಕಿ ಎರಡೂ ಸಮುದಾಯಗಳಿಗೆ ಮಾತುಕತೆ ನಡೆಸಲು ಮನವಿ ಮಾಡುತ್ತೇನೆ. ಹಿಂಸೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ರಾಜ್ಯದಲ್ಲಿ ಶೀಘ್ರವೇ ಶಾಂತಿ ನೆಲೆಸಲಿದೆ ಎಂದು ಭರವಸೆ ನೀಡುತ್ತೇನೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು'' ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ:'ಸ್ತ್ರೀ ದ್ವೇಷಿ ವ್ಯಕ್ತಿ': ಸಂಸತ್ತಿನಲ್ಲಿ ರಾಹುಲ್ 'ಫ್ಲೈಯಿಂಗ್‌ ಕಿಸ್'ಗೆ ಸ್ಮೃತಿ ಇರಾನಿ ಆಕ್ಷೇಪ; ಸ್ಪೀಕರ್‌ಗೆ ಶೋಭಾ ಕರಂದ್ಲಾಜೆ ದೂರು

Last Updated : Aug 9, 2023, 8:10 PM IST

ABOUT THE AUTHOR

...view details