ಕರ್ನಾಟಕ

karnataka

ETV Bharat / bharat

ಕೋವಿಶೀಲ್ಡ್​ ದೃಢೀಕರಣಕ್ಕೆ ಸೀರಮ್​ ಅರ್ಜಿ ಸಲ್ಲಿಸಿಲ್ಲ: ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಸ್ಪಷ್ಟನೆ - ಕೊರೊನಾ ಸುದ್ದಿ

"ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಮೌಲ್ಯಮಾಪನ ಮಾಡಲು, ಡೆವಲಪರ್ ಔಪಚಾರಿಕ ಮಾರ್ಕೆಟಿಂಗ್ ದೃಢೀಕರಣ ಅರ್ಜಿಯನ್ನು ಇಎಂಎಗೆ ಸಲ್ಲಿಸಬೇಕಾಗಿದೆ. ಆದರೆ, ಅದನ್ನು ಇಲ್ಲಿಯವರೆಗೆ ಸ್ವೀಕರಿಸಲಾಗಿಲ್ಲ" ಎಂದು ಇಎಂಎ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

Covishield
ಕೋವಿಶೀಲ್ಡ್​

By

Published : Jul 16, 2021, 12:51 PM IST

ನವದೆಹಲಿ: ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ತಿಳಿಸಿದೆ. "ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಮೌಲ್ಯಮಾಪನ ಮಾಡಲು, ಡೆವಲಪರ್ ಔಪಚಾರಿಕ ಮಾರ್ಕೆಟಿಂಗ್ ದೃಢೀಕರಣ ಅರ್ಜಿಯನ್ನು ಇಎಂಎಗೆ ಸಲ್ಲಿಸಬೇಕಾಗಿದೆ. ಆದರೆ, ಅದನ್ನು ಇಲ್ಲಿಯವರೆಗೆ ಸ್ವೀಕರಿಸಲಾಗಿಲ್ಲ" ಎಂದು ಇಎಂಎ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಫೈಜರ್ ಬಯೋಟೆಕ್‌ನ ಕಾಮಿರ್ನಾಟಿ, ಮಾಡರ್ನಾದ ಸ್ಪೈಕ್‌ವಾಕ್ಸ್, ಅಸ್ಟ್ರಾಜೆನೆಕಾದ ವ್ಯಾಕ್ಸ್‌ಜೆವ್ರಿಯಾ, ಜಾನ್ಸನ್ ಮತ್ತು ಜಾನ್ಸನ್‌ರ ಜಾನ್ಸೆನ್​ನನ್ನು ಕೊರೊನಾ ಲಸಿಕೆಗಳಾಗಿ ಇಎಂಎ ಅನುಮೋದಿಸಿದೆ. ಸೀರಮ್ ಇನ್‌ಸ್ಟಿಟ್ಯೂಟ್ ತನ್ನ ಕೊರೊನಾ ಲಸಿಕೆ ಕೋವಿಶೀಲ್ಡ್​ಗಾಗಿ ಒಂದು ತಿಂಗಳಲ್ಲಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಯಿಂದ ಅನುಮೋದನೆ ಪಡೆಯುವ ವಿಶ್ವಾಸದಲ್ಲಿದೆ ಎಂದು ಕಂಪನಿಯ ಸಿಇಒ ಆದರ್ ಪೂನವಾಲಾ ಈ ಹಿಂದೆ ಹೇಳಿದ್ದರು.

ಇಂಡಿಯಾ ಗ್ಲೋಬಲ್ ಫೋರಂ 2021ರಲ್ಲಿ ಮಾತನಾಡಿದ ಪೂನವಾಲಾ, "ಇದು ವಿವಾದವಲ್ಲ. ಕೇವಲ ಅನುಪಾತದಿಂದ ಹೊರಬಂದಿದೆ. ಲಸಿಕೆಗಳ ವಿಷಯವು ದೇಶಗಳ ನಡುವಿನ ಪರಸ್ಪರ ಸಂಬಂಧದ ಆಧಾರದ ಮೇಲೆ ಇರಬೇಕು" ಎಂದು ಹೇಳಿದರು. "ಅರ್ಜಿ ಸಲ್ಲಿಸಲು ನಮ್ಮನ್ನು ಕೇಳುವಲ್ಲಿ ಇಎಂಎ ಸಂಪೂರ್ಣವಾಗಿ ಸರಿಯಾಗಿದೆ. ಅರ್ಜಿ ಸಲ್ಲಿಸಲು ಮುಂದಾಗಿದ್ದೇವೆ. ಆ ಪ್ರಕ್ರಿಯೆ ಸಮಯ ತೆಗೆದುಕೊಳ್ಳಲಿದೆ" ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details