ನಿವಾಡಿ :ಕೊರೊನಾ ರೋಗಿಗಳ ಮನೆಗಳಿಗೆ ಜಿಲ್ಲಾಡಳಿತ ಬೀಗ ಜಡಿದ ಘಟನೆ ನಗರದ ಐದನೇ ಮತ್ತು ಆರನೇ ವಾರ್ಡ್ನಲ್ಲಿ ಕಂಡು ಬಂದಿದೆ.
ಕೊರೊನಾ ರೋಗಿಗಳು ಗೈಡ್ಲೈನ್ ಪಾಲಿಸದ ಕಾರಣ ಜಿಲ್ಲಾಡಳಿತ ನಗರದ ಐದನೇ ಮತ್ತು ಆರನೇ ವಾರ್ಡ್ನ ಸೋಂಕಿತರ ಮನೆಗಳಿಗೆ ಬೀಗ ಹಾಕಿತ್ತು.
ಈ ಸುದ್ದಿ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಮನೆಗೆ ಹಾಕಿದ ಬೀಗಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತು.
ಕೋವಿಡ್ ರೋಗಿಗಳ ಮನೆಗೆ ಬೀಗ ಜಡಿದ ಆಡಳಿತಾಧಿಕಾರಿ ನಾವು ಕೊರೊನಾ ಸೋಂಕಿತ ಮನೆಗಳಿಗೆ ಹೊರ ಬರದಂತೆ ಮನವಿ ಮಾಡಿದ್ದೇವೆ. ಆದ್ರೂ ಸಹ ಅವರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಹೊರಗಡೆ ಬರುತ್ತಿದ್ದರು. ಇದರಿಂದ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಾಗಿತ್ತು.
ಹೀಗಾಗಿ, ಅಂತಹ ಮನೆಗಳಿಗೆ ಬೀಗ ಹಾಕಿದ್ದೇವೆ. ಈಗ ಮತ್ತೊಮ್ಮೆ ಎಚ್ಚರಿಕೆ ನೀಡಿ ಬೀಗ ತೆಗೆಯಲಾಗಿದೆ ಎಂದು ತಹಶೀಲ್ದಾರ್ ನಿಕೇತ್ ಚೌರಾಸಿಯಾ ಹೇಳಿದರು.
ಸೋಂಕಿತರಿಗೆ ಹೆಚ್ಚು ಕಡಿಮೆ ಆದ್ರೆ ಯಾರು ಹೊಣೆ ಅಂತ ಸ್ಥಳೀಯರು ಆಡಳಿತಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.