ನವದೆಹಲಿ:ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಕೇವಲ ತಾತ್ಕಾಲಿಕ ಸಿಎಂ ಆಗಿದ್ದಾರೆ. ಕೆಲ ದಿನಗಳ ಬಳಿಕ ಬಿಜೆಪಿ ಆ ಸ್ಥಾನವನ್ನ ವಾಪಸ್ ಪಡೆದು ತನ್ನ ಅಭ್ಯರ್ಥಿಯನ್ನ ಹಾಕಲಿದೆ ಎಂದು ಆರ್ಜೆಡಿ ಹಿರಿಯ ನಾಯಕ ಮನೋಜ್ ಝಾ ಭವಿಷ್ಯ ನುಡಿದಿದ್ದಾರೆ.
ನಿತೀಶ್ ತಾತ್ಕಾಲಿಕ ಸಿಎಂ ಅಷ್ಟೇ: ಬಳಿಕ ಆ ಸ್ಥಾನವನ್ನು ಬಿಜೆಪಿ ಹಿಂಪಡೆಯಲಿದೆ - ಮನೋಜ್ ಝಾ ಭವಿಷ್ಯ - ಬಿಹಾರ ಬಿಜೆಪಿ
ಬಿಹಾರದಲ್ಲಿ ಬಿಜೆಪಿ ಈಗಾಗಲೇ ಆಪರೇಷನ್ ಕಮಲ ಆರಂಭ ಮಾಡಿದೆ. ಇದು ಕರ್ನಾಟಕ ಹಾಗೂ ಮಧ್ಯಪ್ರದೇಶಕ್ಕಿಂತ ವಿಭಿನ್ನವಾಗಿರಲಿದೆ ಎಂದು ಝಾ ಅವರು ಹೇಳಿದ್ದಾರೆ. ಸಂಪುಟ ರಚನೆ ಸಂಬಂಧ ನಿತೀಶ್ ಮೇಲೆ ಒತ್ತಡ ಹೇರಲಾಗಿದೆ ಎಂದಿದ್ದಾರೆ.
ಮನೋಜ್ ಝಾ
ಬಿಹಾರದಲ್ಲಿ ಬಿಜೆಪಿ ಈಗಾಗಲೇ ಆಪರೇಷನ್ ಕಮಲ ಆರಂಭ ಮಾಡಿದೆ. ಇದು ಕರ್ನಾಟಕ ಹಾಗೂ ಮಧ್ಯಪ್ರದೇಶಕ್ಕಿಂತ ವಿಭಿನ್ನವಾಗಿರಲಿದೆ ಎಂದು ಝಾ ಅವರು ಹೇಳಿದ್ದಾರೆ. ಈಗ ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಆದರೆ, ಮುಂದೆ ಬಿಜೆಪಿ ನಿತೀಶ್ ಕುಮಾರ್ ಅವರನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ.
ಈ ಸಂಬಂಧ ಈಗಾಗಲೇ ಇಬ್ಬರು ಉಪಮುಖ್ಯಮಂತ್ರಿಗಳನ್ನ ಪಕ್ಷ ನೇಮಕ ಮಾಡಿದೆ. ಅಷ್ಟೇ ಅಲ್ಲ ಪ್ರಮುಖ ಖಾತೆಗಳನ್ನ ಪಡೆದುಕೊಳ್ಳಲು ಬಿಜೆಪಿ ಯಶಸ್ವಿ ಆಗಿದೆ. ಹೀಗಾಗಿ ನಿತೀಶ್ ಕುಮಾರ್ ಭಾರಿ ಒತ್ತಡದಲ್ಲಿದ್ದಾರೆ ಎಂದು ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ.