ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದ ಖಂಬಟ್ಕಿ ಘಾಟ್​​ನಲ್ಲಿ ಆರು ಸುರಂಗ ಮಾರ್ಗಗಳ ಪೋರ್ಟಲ್​ಗೆ ಚಾಲನೆ ನೀಡಿದ ನಿತಿನ್ ಗಡ್ಕರಿ

ಸತಾರಾ-ಪುಣೆ ಭಾಗದಲ್ಲಿರುವ ಖಂಬಟ್ಕಿ ಘಾಟ್​ನಲ್ಲಿ ಆರು ಸುರಂಗ ಮಾರ್ಗಗಳ ಕಾಮಗಾರಿ ನಡೆಯಲಿದ್ದು, ಈ ಯೋಜನೆಯಿಂದ ಬೆಂಗಳೂರು- ಮುಂಬೈ ಹೆದ್ದಾರಿ ಯೋಜನೆಗಳು ವೇಗ ಪಡೆದುಕೊಳ್ಳಲಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Nitin Gadkari launches breakthrough of RHS portal of new 6-lane tunnel in Maharashtra's Khambatki ghat
ಮಹಾರಾಷ್ಟ್ರದ ಖಂಬಟ್ಕಿ ಘಾಟ್​​ನಲ್ಲಿ ಆರು ಸುರಂಗ ಮಾರ್ಗಗಳ ಪೋರ್ಟಲ್​ಗೆ ಚಾಲನೆ ನೀಡಿದ ನಿತಿನ್ ಗಡ್ಕರಿ

By

Published : Jan 29, 2022, 10:23 AM IST

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಮಹಾರಾಷ್ಟ್ರದ ಪುಣೆಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಸತಾರಾ ಜಿಲ್ಲೆಯ ಖಂಬಟ್ಕಿ ಘಾಟ್‌ನ ನಡೆಸಲಾಗುತ್ತಿರುವ ಹೊಸ ಆರು ಸುರಂಗ ಮಾರ್ಗಗಳ (ತಲಾ ಮೂರು ಲೇನ್​ಗಳ ಅವಳಿ ಸುರಂಗಗಳು) ಬಲಭಾಗದ ​ಪೋರ್ಟಲ್​ (RHS Portal- Right Hand Side Portal) ಕಾಮಗಾರಿಗೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಸುರಂಗ ಮಾರ್ಗಕ್ಕೆ ನಿತಿನ್ ಗಡ್ಕರಿ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಯೋಜನೆಗಳಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಸತಾರಾ - ಪುಣೆ ಭಾಗದಲ್ಲಿರುವ ಖಂಬಟ್ಕಿ ಘಾಟ್​ನಲ್ಲಿ ನಡೆಯುತ್ತಿರುವ ಈ ಯೋಜನೆಯಿಂದ ಬೆಂಗಳೂರು- ಮುಂಬೈ ಹೆದ್ದಾರಿ ಯೋಜನೆಗಳು ವೇಗ ಪಡೆದುಕೊಳ್ಳಲಿವೆ ಎಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಯೋಜನೆಯಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಅಷ್ಟೇ ಅಲ್ಲದೇ ಪುಣೆ-ಸತಾರಾದ ನಡುವಿನ ಮಾರ್ಗವನ್ನು ಕಡಿತ ಮಾಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಯಾರು ಯಾರು ಇದ್ದರೆಂದು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಈ ಯೋಜನೆಯಿಂದ ಪುಣೆ, ಸತಾರಾ ಮತ್ತು ಸೋಲಾಪುರಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಜೊತೆಗೆ ವಾಯುಮಾಲಿನ್ಯವೂ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:Punjab Polls: ಪಂಜಾಜ್ ಚುನಾವಣೆಯಲ್ಲಿ ಇದೊಂದು ಭಾಗದಲ್ಲಿ ಗೆದ್ದರೆ ಅಧಿಕಾರ ಶತಸಿದ್ಧ..

ABOUT THE AUTHOR

...view details