ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ಮಧ್ಯೆ ಕೆಲವೊಂದು ರಾಜ್ಯಗಳಲ್ಲಿ ಕೋವಿಡ್ ವ್ಯಾಕ್ಸಿನ್ ಅಭಾವ ಕೂಡ ಉದ್ಭವವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಹಂಚಿಕೊಂಡಿದೆ.
2021ರ ಅಂತ್ಯದ ವೇಳೆಗೆ ದೇಶದಲ್ಲಿ 200 ಕೋಟಿ ಕೋವಿಡ್ ಡೋಸ್ ಲಭ್ಯವಾಗಲಿದೆ ಎಂದಿದೆ. ಈ ವರ್ಷದ ಆಗಸ್ಟ್ನಿಂದ ಡಿಸೆಂಬರ್ ನಡುವೆ ಇಷ್ಟೊಂದು ವ್ಯಾಕ್ಸಿನ್ ದೇಶದಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.
ಸೀರಮ್ ಇನ್ಸ್ಸ್ಟಿಟ್ಯೂಪ್ ಆಫ್ ಇಂಡಿಯಾ ತಯಾರಿಸಿದ 75 ಕೋಟಿ ಅಸ್ಟ್ರಾಜೆನಿಕಾ, ಭಾರತ್ ಬಯೋಟೆಕ್ನ 55 ಕೋಟಿ ಡೋಸ್ ಕೊವ್ಯಾಕ್ಸಿನ್ ಸಹ ಇದರಲ್ಲಿ ಸೇರಿವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಮುಂದಿನ ಐದು ತಿಂಗಳಲ್ಲಿ 200 ಕೋಟಿ ಡೋಸ್ ಲಸಿಕೆ ತಯಾರಿಸಲಾಗುವುದು ಎಂದಿರುವ ಅವರು, ಮುಂದಿನ ವರ್ಷ ಈ ಸಂಖ್ಯೆ 300 ಕೋಟಿ ದಾಟಲಿದೆ ಎಂದಿದ್ದಾರೆ.