ಕರ್ನಾಟಕ

karnataka

ETV Bharat / bharat

293ನೇ ಮಧುರೈ ಮಠಾಧೀಶ ನಾನೇ ಎಂದು ಸ್ವಾಮಿ ನಿತ್ಯಾನಂದ ಸ್ವಯಂ ಘೋಷಣೆ..!

293ನೇ ಮಧುರೈ ಅಧೀನಂ ತಾನೇ ಎಂದು ಸ್ವಾಮಿ ನಿತ್ಯಾನಂದ ಸ್ವಯಂ ಘೋಷಿಸಿಕೊಂಡಿದ್ದಾರೆ. ಮಧುರೈ 292ನೇ ಪೀಠಾಧೀಶ ಶ್ರೀ ಅರುಣಗಿರಿನಾಥರ್​(77) ಕಳೆದ ವಾರವಷ್ಟೇ ಇಹಲೋಕ ತ್ಯಜಿಸಿದ್ದರು.

Adheenam
293ನೇ ಮಧುರೈ ಮಠಾಧೀಶ ತಾನೇ ಎಂದು ಸ್ವಾಮಿ ನಿತ್ಯಾನಂದ ಸ್ವಯಂ ಘೋಷಣೆ

By

Published : Aug 18, 2021, 4:53 PM IST

Updated : Aug 18, 2021, 5:02 PM IST

ಮಧುರೈ/ತಮಿಳುನಾಡು:ದೇಶದಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ನಾನೇ ಹೊಸ ಮಧುರೈ ಅಧೀನಂ(ಪೀಠಾಧೀಶ) ಎಂದು ಘೋಷಿಸಿಕೊಂಡಿದ್ದಾರೆ.

293 ನೇ ಮಧುರೈ ಅಧೀನಂ ತಾನೇ ಎಂದು ಘೋಷಣೆ

ಕಳೆದ ವಾರ ಮಧುರೈ ಅಧೀನಂನ 292 ನೇ ಪೀಠಾಧೀಶರ ನಿಧನ ನಂತರ ನಿತ್ಯಾನಂದ ತಮ್ಮ ಸ್ವಯಂ ಘೋಷಿತ ನೇಮಕಾತಿಯಲ್ಲಿ ಅವರ ಹೊಸ ಅಧೀನಂ ಆಗುವ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ, ಮಧುರೈ ಅಧೀನಂ 292 ನೇ ಧರ್ಮಗುರು, ಶ್ರೀ ಅರುಣಗಿರಿನಾಥರ್​(77) ಮಧುರೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಸ್ವಾಮಿ ನಿತ್ಯಾನಂದ

ಕಳೆದ ಕೆಲವು ವರ್ಷಗಳಿಂದ, ನಿತ್ಯಾನಂದರು ತಾವು ಅಧೀನಂ ಶ್ರೀ ಅರುಣಗಿರಿನಾಥರ ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಮಧುರೈ ಅಧೀನಂ ಅನ್ನು ಅತ್ಯಂತ ಹಳೆಯ ಶೈವ ಅಧೀನಂಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮತ್ತು ಇದನ್ನು ಸಹಸ್ರಮಾನಗಳ ಹಿಂದೆ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಮೂವರು ನಾಯನ್ಮಾರ್ (ಶಿವನ ಶಿಷ್ಯರು) ಒಬ್ಬರಾದ ತಿರುಜ್ಞಾನ ಸಂಬಂಧರಿಂದ ಪುನಶ್ಚೇತನಗೊಂಡಿದೆ ಎಂದು ಹೇಳಲಾಗುತ್ತದೆ.

293ನೇ ಮಧುರೈ ಮಠಾಧೀಶ ತಾನೇ ಎಂದು ಸ್ವಾಮಿ ನಿತ್ಯಾನಂದ ಸ್ವಯಂ ಘೋಷಣೆ
ನಿತ್ಯಾನಂದ ಸ್ವಯಂ ಘೋಷಣೆ
293ನೇ ಮಧುರೈ ಮಠಾಧೀಶ ತಾನೇ ಎಂದು ಸ್ವಾಮಿ ನಿತ್ಯಾನಂದ ಸ್ವಯಂ ಘೋಷಣೆ
ನಿತ್ಯಾನಂದ ಸ್ವಯಂ ಘೋಷಣೆ
ನಿತ್ಯಾನಂದ ಸ್ವಯಂ ಘೋಷಣೆ
Last Updated : Aug 18, 2021, 5:02 PM IST

ABOUT THE AUTHOR

...view details