ಕೈಲಾಸ: ನಿತ್ಯಾನಂದನ ಕೈಲಾಸಕ್ಕೆ ಬರುವವರಿಗೆ ಸ್ವಾಗತಕೋರಿದ್ದು, ಜೊತೆಗೆ ಮೂರು ದಿನಗಳ ಉಚಿತ ವೀಸಾ, ಆಹಾರ ಮತ್ತು ವಸತಿ ನೀಡುವುದಾಗಿ ಘೋಷಿಸಿದ್ದಾನೆ. ಇ-ಮೇಲ್ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ನಿತ್ಯಾನಂದ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಕೈಲಾಸಕ್ಕೆ ಬರಲು ಬಯಸುವವರು contact@kailaasa.org ಗೆ ಮೇಲ್ ಮಾಡಬಹುದು. ಅಲ್ಲದೇ ಮೂರು ದಿನಗಳ ವೀಸಾವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾನೆ.