ಕರ್ನಾಟಕ

karnataka

ETV Bharat / bharat

ಐಎಸ್​ಎಲ್​ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ.. ನೀತಾ ಅಂಬಾನಿ ಮೆಚ್ಚುಗೆ - ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶ

ಭಾರತೀಯ ಫುಟ್ಬಾಲ್​ ಆಟಗಾರರಿಗೆ ಅವಕಾಶ ನೀಡುತ್ತಿರುವ ಇಂಡಿಯನ್​ ಸೂಪರ್​ ಲೀಗ್​ ಅವರಿಗೆ ಪ್ರೋತ್ಸಾಹವನ್ನು ತೋರುತ್ತಿದೆ.

http://10.10.50.85:6060/reg-lowres/09-October-2023/f793a5dwaaas0-p_0910newsroom_1696825313_1073.png
http://10.10.50.85:6060/reg-lowres/09-October-2023/f793a5dwaaas0-p_0910newsroom_1696825313_1073.png

By ETV Bharat Karnataka Team

Published : Oct 9, 2023, 11:10 AM IST

ಮುಂಬೈ( ಮಹಾರಾಷ್ಟ್ರ): ಭಾರತೀಯ ಯುವ ಫುಟ್ಬಾಲ್​ ಆಟಗಾರರಿಗೆ ಪ್ರೋತ್ಸಾಹ ಮತ್ತು ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶವನ್ನು ಇಂಡಿಯನ್​ ಸೂಪರ್​ ಲೀಗ್​ (ಐಎಸ್​ಎಲ್​) ನೀಡಿದೆ ಎಂದು ಫುಟ್ಬಾಲ್​ ಸ್ಪೋರ್ಟ್​​ ಡೆವೆಲಪ್​ಮೆಂಟ್​​ ಲಿಮಿಟೆಡ್​ (ಎಫ್​ಎಸ್​ಡಿಎಲ್​) ಸಂಸ್ಥಾಪಕ ಅಧ್ಯಕ್ಷರಾದ ನೀತಾ ಅಂಬಾನಿ ಪ್ರಶಂಸಿದರು.

ಸಂದೇಶ್​​ ಜಿನ್ಗನ್​, ಆಕಾಶ್​ ಮಿಶ್ರಾ, ಸಹಾಲ್​ ಅಬ್ದುಲ್​ ಸಮದ್​​ ಸೇರಿದಂತೆ ಅನೇಕ ಪ್ರತಿಭಾನ್ವಿತರು ಫುಟ್ಬಾಲ್​ನಲ್ಲಿ ಅದ್ಬುತ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿಯೊಬ್ಬರು ಉತ್ತಮ ಪ್ರದರ್ಶನ ತೋರುತ್ತಿದ್ದು, ಅವರನ್ನು ಐಎಸ್​ಎಲ್​ ಗುರುತಿಸಿರುವುದು ಪ್ರೋತ್ಸಾಹದಾಯಕವಾಗಿದೆ. ಸಂಪೂರ್ಣ ಲೀಗ್​​​ ತೃಪ್ತಿಕರವಾಗಿದ್ದು, ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದರು.

ದೇಶದಲ್ಲಿ 10 ವರ್ಷದಲ್ಲಿ ಫುಟ್ಬಾಲ್​ ಬೆಳೆದಿರುವುದು ಈ ಪರಿ ರೋಮಾಂಚನಕಾರಿ ಮತ್ತು ಪರಿಪೂರ್ಣ ಪ್ರಯಣವಾಗಿದೆ. ಈ ಪ್ರಯಾಣದಲ್ಲಿ ಅನೇಕ ಮಂದಿ ಫುಟ್ಬಾಲ್​ ಅಭಿಮಾನಿಗಳನ್ನು ಸಂಪಾದಿಸಿದೆ. ಎಲ್ಲ ಆಟಗಾರರಿಗೆ ದೊಡ್ಡ ಸಂಖ್ಯೆಯಲ್ಲಿ ಆಭಿಮಾನಿಗಳು, ಪ್ರಯೋಜಕರು ಮತ್ತು ಬೆಂಬಲಿಗರು ಅವರ ಅದ್ಬುತ ಆಟಕ್ಕೆ ಜೊತೆಯಾಗುತ್ತಿದ್ದಾರೆ ಎಂದರು.

ಈ ಪ್ರಯಾಣದಲ್ಲಿ ಸಂಪೂರ್ಣ ಎನಿಸುತ್ತಿರುವ ಅಂಶ ಎಂದರೆ ಯುವ ಪ್ರತಿಭೆಗಳನ್ನು ಬೆಳೆಸಿ, ಅವರಿಗೆ ವೇದಿಕೆ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ಪ್ರದರ್ಶನ ತೋರಲು ಅವಕಾಶ ನೀಡಲಾಗುತ್ತಿದೆ. ಅನೇಕ ಯುವ ಫುಟ್ಬಾಲ್​ ಆಟಗಾರರನ್ನು ಅನ್ವೇಷಣೆ ಮಾಡಲಾಗಿದ್ದು, ಅವರನ್ನು ಐಎಸ್​ಎಲ್​ ಬೆಳೆಸುತ್ತಿದೆ. ಸಂದೇಶ್​​ ಜಿನ್ಗನ್​, ಸಹಲ್​ ಅಬ್ದುಲ್​ ಸಮದ್​, ಆಕಾಶ್​ ಮಿಶ್ರಾ ನಂತಹ ಅನೇಕ ಮಂದಿಗೆ ಇದೀಗ ಜಾಗತಿಕ ವೇದಿಕೆಯಲ್ಲಿ ಆಡುತ್ತಿದ್ದಾರೆ. ನಿಜಕ್ಕೂ ಐಎಸ್​ಎಲ್​ಗೆ ಇದೊಂದ ಹೆಮ್ಮೆಯ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು.

ಇದೆ ವೇಳೆ, ನೀತಾ ಅಂಬಾನಿ ಜೊತೆಗೆ ಅಂತರಾಷ್ಟ್ರೀಯ ಒಲಂಪಿಕ್​ ಸಮಿತಿಯ ಅಧ್ಯಕ್ಷರಾದ ಥಾಮಸ್​ ಬ್ಯಾಚ್ ಕೂಡ ಜೊತೆಯಾಗಿದ್ದು, ಕಳೆದ 10 ವರ್ಷಗಳಿಂದ ಫುಟ್ಬಾಲ್​ನಲ್ಲಿ ದೊಡ್ಡ ಸಾಧನೆ ಮಾಡುವಲ್ಲಿ ಐಎಸ್​ಎಲ್​ ಸಹಾಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಐಲ್ಯಾಂಡರ್ಸ್ ಮತ್ತು ಬ್ಲಾಸ್ಟರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಪ್ರೇಕ್ಷಕರ ಬೆಂಬಲಕ್ಕೆ ಬ್ಯಾಚ್ ಆಶ್ಚರ್ಯ ವ್ಯಕ್ತಪಡಿಸಿದರು. ದೇಶದ ಅಗ್ರ-ಶ್ರೇಣಿಯ ಫುಟ್‌ಬಾಲ್ ಲೀಗ್‌ಗೆ ಅದ್ಬುತ ಆಕಾರ ನೀಡಿದರ ಹಿಂದೆ ಅವರು ನೀತಾ ಅಂಬಾನಿ ಮತ್ತು ಎಫ್‌ಎಸ್‌ಡಿಎಲ್‌ನ ಪಾತ್ರ ಇದೆ ಎಂದು ಪ್ರಶಂಸಿದರು.

ನಾನು ಕೂಡ ಕ್ರೀಡೆ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ಅತ್ಯುತ್ಸಾಹದ ಅಭಿಮಾನಿಗಳು ಪಕ್ಕ ಪಕ್ಕದಲ್ಲಿ ಕುಳಿತು ಆಟಗಾರರನ್ನು ಸಂಭ್ರಮಿಸುವುದನ್ನು ಕಾಣುತ್ತಿದ್ದೇನೆ. ಇದು ನಾವು ಎಂಜಾಯ್​ ಮಾಡುವ ನಿಜ ಕ್ರೀಡಾ ಅನುಭವನ್ನು ನೀಡುತ್ತಿದೆ. ಇದು ಉತ್ತಮ ಮ್ಯಾಚ್​​ ಆಗಿದ್ದು, ಕಳೆದ ಹತ್ತು ವರ್ಷದ ಐಎಸ್​​ಎಲ್​ ಸಾಧನೆ ಅದರಲ್ಲೂ ನೀತಾ ಅಂಬಾನಿ ಮತ್ತು ಅವರ ತಂಡವನ್ನು ನಾನು ಪ್ರಶಂಸಿಬಹುದಷ್ಟೇ ಎಂದರು

ಈ ಹಿಂದೆ ಭಾರತದಲ್ಲಿ ಫುಟ್ಬಾಲ್​ ಹೇಗೆ ಬಂದಿತು, ಇದೀಗ ಎಲ್ಲಿದೆ ಎಂಬುದನ್ನು ಮನಗಂಡಾಗ ಅದ್ಬುತ ಎನ್ನಿಸುತ್ತದೆ. ಇದಕ್ಕೆ ಅಭಿಮಾನಿಗಳಿಗೂ ಧನ್ಯವಾದ. ನೀತಾ ಅಂಬಾನಿ ಮತ್ತು ಅವರ ತಂಡ ಅಭಿಮಾನಿಗಳನ್ನು ಸಬಲೀಕರಣ ಮಾಡಿ, ಫುಟ್ಬಾಲ್​ನ್ನು ಎಂಜಾಯ್​ ಮಾಡುತ್ತಿರುವುದಕ್ಕೆ ಧನ್ಯವಾದ ಎಂದು ಐಎಸ್​ಎಲ್​ ಆಟ ವೀಕ್ಷಿಸಿ ತಮ್ಮ ಅನುಭವ ವ್ಯಕ್ತಪಡಿಸಿದರು.

141ನೇ ಐಒಸಿ ಕಾಂಗ್ರೆಸ್​ ಮುಂಬೈನಲ್ಲಿ ಅಕ್ಟೋಬರ್​ 14ರಿಂದ ಆರಂಭವಾಗುತ್ತಿದ್ದು, ಇದನ್ನು ನೀತಾ ಅಂಬಾನಿ ಭಾರತೀಯ ನಿಯೋಗವನ್ನು ಮುನ್ನಡೆಸಿದರು. ಭಾರತವು ಬಹು-ಕ್ರೀಡಾ ರಾಷ್ಟ್ರವಾಗುವುದನ್ನು ನೀತಾ ಮೆಚ್ಚುಗೆ ಸೂಚಿಸಿದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 19 ನೇ ಆವೃತ್ತಿಯಲ್ಲಿ ದಾಖಲೆಯ 107 ಪದಕ ಗೆದ್ದ ಕ್ರೀಡಾಳುಗಳಿಗೆ ಸಾಧನೆ ಹೊಗಳಿದರು

ಭಾರತೀಯ ಅಥ್ಲೇಟ್​​ಗಳು ತಮ್ಮ ಮಾಪನದ ಎತ್ತರವನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚಿಸಿಕೊಂಡಿದ್ದು, ಅವರಿಗೆ ಸರಿಯಾದ ವ್ಯವಸ್ಥೆಯಿಂದ ಬೆಂಬಲ ಮತ್ತು ಅವರ ಪ್ರತಿಭೆ ಮೂಲ ಸೌಕರ್ಯದ ಪ್ರೋತ್ಸಾಹ ಲಭ್ಯವಾಗುತ್ತಿದೆ ಎಂದರು. ಇದೆ ವೇಳೆ ಮುಂದಿನ ಪ್ಯಾರಿಸ್​​ ಒಲಿಂಪಿಕ್​ 2024ರಲ್ಲೂ ಭಾರತದ ಸಾಧನೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು. (ಎಎನ್​ಐ)

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಕಂಚು ತಂದುಕೊಟ್ಟ ಹಾಕಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಣೆ

ABOUT THE AUTHOR

...view details