ಮಂಗಳೂರು:ಪ್ರಸ್ತುತ ಜಾಗತಿಕವಾಗಿ ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳಂತಹ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಎದುರಿಸಲು ಉತ್ತಮ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಸಲಹೆ ನೀಡಿದರು.
ಮಂಗಳೂರಿನ ಸುರತ್ಕಲ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NIT-K) ನಡೆದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿ, ಪದವೀಧರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಗತ್ತಿನ ಪ್ರಸ್ತುತ ಸವಾಲುಗಳು ಭೂಮಿಯನ್ನೇ ಬದಲಾಯಿಸಬಹುದು. ಇವು ನಮ್ಮ ಜೀವದ ಮೇಲೂ ಪರಿಣಾಮ ಬೀರಬಹುದು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಯು ತನ್ನನ್ನು ತಾನು ಉಳಿಸಿಕೊಳ್ಳಲು ಸವಾಲುಗಳನ್ನು ಎದುರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸ್ಟಾರ್ಟಪ್ಗೆ ಉತ್ತಮ ಅವಕಾಶ:
ಇಂಜಿನಿಯರಿಂಗ್ ಪದವೀಧರರಿಗೆ ಉದ್ಯಮ ಸ್ಥಾಪನೆ ಹಾಗೂ ಸ್ಟಾರ್ಟಪ್ಗಳ(ನವೋದ್ಯಮ) ಸ್ಥಾಪನೆಗೆ ವಿಫುಲ ಅವಕಾಶಗಳಿವೆ. ದೇಶದಲ್ಲಿ ಸ್ಟಾರ್ಟಪ್ಗಳ ಬೆಳವಣಿಗೆ ಉತ್ತುಂಗದಲ್ಲಿದೆ. ಸಾಕಷ್ಟು ವೃತ್ತಿಪರರು ಅತಿ ಹೆಚ್ಚು ವೇತನ ನೀಡುವ ಉದ್ಯೋಗಗಳನ್ನು ತೊರೆದು ಸ್ಟಾರ್ಟಪ್ ಬ್ಯುಸಿನೆಸ್ ಕಡೆಗೆ ವಾಲುತ್ತಿದ್ದಾರೆ. ಇದರೊಂದಿಗೆ ದೇಶಿಯ ಗ್ರಾಹಕರ ಅವಶ್ಯಕತೆಗಳ ಪೂರೈಕೆ ಕಡೆಗೆ ಗಮನಹರಿಸುತ್ತಿದ್ದಾರೆ ಎಂದು ಕೆ.ಶಿವನ್ ಹೇಳಿದ್ದಾರೆ.
'ಸ್ಟೇಸ್'ನಲ್ಲೂ ಆತ್ಮನಿರ್ಭರ:
ಭಾರತೀಯ ಬಾಹ್ಯಾಕಾಶ ವಲಯದಲ್ಲೂ ಆತ್ಮನಿರ್ಭರ ಭಾರತ್ ಅಡಿಯಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ಈ ಮೂಲಕ ಬಾಹ್ಯಾಕಾಶ ವಲಯದಲ್ಲಿ ಸುಧಾರಣೆಗಳನ್ನು ತಂದು ಅಲ್ಲಿಂದಲೂ ಕೂಡಾ ಆದಾಯ ಗಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ನಿಮ್ಮ ಮನಸ್ಸಿನಂತೆ ನಡೆದುಕೊಳ್ಳಿ: