ಕರ್ನಾಟಕ

karnataka

ETV Bharat / bharat

35ನೇ ವಯಸ್ಸಿಗೆ ಕೇಂದ್ರ ಸಚಿವ ಸ್ಥಾನ! ಶಾಲಾ ಶಿಕ್ಷಕನಾಗಿ ಸಂಸದನಾದ ಯುವಕನಿಗೆ ಮೋದಿ ಮಣೆ - ಪಶ್ಚಿಮ ಬಂಗಾಳ ಸಂಸದ

ಕೇಂದ್ರ ಸಚಿವ ಸಂಪುಟದಲ್ಲಿ ಬಹುಮುಖ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಚುನಾವಣಾ ಕಣಕ್ಕಿಳಿದು ಮೊದಲ ಅವಧಿಗೆ ಸಂಸದನಾಗಿ ಆಯ್ಕೆಯಾಗಿದ್ದ ಯುವಕನೋರ್ವನಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿದೆ.

Nisith Pramanik
Nisith Pramanik

By

Published : Jul 7, 2021, 7:14 PM IST

ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಹುತೇಕ ಹೊಸ ಮುಖಗಳಿಗೆ ಈ ಸಲದ ಕ್ಯಾಬಿನೆಟ್​​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅತಿ ಹೆಚ್ಚು ಯುವ ಸಂಸದರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 43 ಸಚಿವರ ಪೈಕಿ 35ನೇ ವಯಸ್ಸಿನಲ್ಲೇ ಸಂಸದನೋರ್ವ ಸಂಪುಟ ಸೇರುವ ಮೂಲಕ ಹೊಸ ದಾಖಲೆ ಬರೆದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿಸಿತ್​

ಬಿಹಾರದ ಕೂಚ್​ ಬಿಹಾರ್‌ ಕ್ಷೇತ್ರದ ಯುವ ಸಂಸದ ನಿಸಿತ್​ ಪ್ರಮಾಣಿಕ ಕೇವಲ 35ನೇ ವಯಸ್ಸಿಗೆ ಮೋದಿ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. BCA ಪದವಿ ಪಡೆದುಕೊಂಡಿರುವ ಇವರು, ರಾಜಕೀಯ ಪ್ರವೇಶ ಪಡೆದುಕೊಳ್ಳುವುದಕ್ಕೂ ಮೊದಲು ಸಹಾಯಕ ಶಿಕ್ಷಕರಾಗಿದ್ದರು.

ಇದನ್ನೂ ಓದಿರಿ: ಚುನಾವಣೆ ಹಿನ್ನೆಲೆಯಲ್ಲಿ ದಲಿತ, ಹಿಂದುಳಿದವರಿಗೆ ಸಚಿವ ಸ್ಥಾನ ನೀಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ

2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ನಿಸಿತ್​ ಪ್ರಮಾಣಿಕ್​ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಕಳೆದ ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದರು. ಆದರೆ ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರಾಗಿ ಮುಂದುವರೆದಿದ್ದರು. ಇದೀಗ ಅವರನ್ನು ಮೋದಿ ಕ್ಯಾಬಿನೆಟ್​ನಲ್ಲಿ ಸೇರಿಸಿಕೊಳ್ಳಲಾಗಿದೆ.

ABOUT THE AUTHOR

...view details