ಕರ್ನಾಟಕ

karnataka

ETV Bharat / bharat

ಮೊಹಾಲಿ ಸ್ಫೋಟ ಪ್ರಕರಣ: ನಿಶಾನ್‌ ಸಿಂಗ್‌ ಬಂಧನ, ಐದು ದಿನ ಪೊಲೀಸ್​ ಕಸ್ಟಡಿಗೆ - ಫರೀದ್​​ ಕೋಟ್​ ಎಸ್​​​​ಪಿ ಬಾಲಕ್ರಿಶನ್​ ಸಿಂಗ್ಲಾ

ಬಂಧಿತ ನಿಶಾನ್‌ ಸಿಂಗ್‌ ಈ ಹಿಂದೆ ಉತ್ತರಪ್ರದೇಶದಿಂದ ಪಂಜಾಬ್‌ಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ 4 ದರೋಡೆಕೋರರನ್ನು ಫರೀದ್‌ಕೋಟ್ ಪೊಲೀಸರು ಬಂಧಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

Nishan Singh arrested from Tarn Taran, Faridkot police got 5 days police remand
ಮೊಹಾಲಿ ಸ್ಫೋಟ ಪ್ರಕರಣ: ನಿಶಾನ್‌ ಸಿಂಗ್‌ ಬಂಧನ, ಐದು ದಿನ ಪೊಲೀಸ್​ ಕಸ್ಟಡಿಗೆ

By

Published : May 12, 2022, 10:25 PM IST

ಫರೀದ್​ಕೋಟ್​( ಪಂಜಾಬ್​): ಮೊಹಾಲಿ ಸ್ಫೋಟ ಪ್ರಕರಣದಲ್ಲಿ ತರ್ನ್‌ ತರಣ್‌ನಿಂದ ಬಂಧಿತನಾದ ನಿಶಾನ್‌ ಸಿಂಗ್‌ನನ್ನು 5 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಮೊಹಾಲಿ ಪ್ರಕರಣದಲ್ಲಿ ನಿಶಾನ್ ಸಿಂಗ್ ಬಂಧನವನ್ನು ಎಸ್ಪಿ ನಿರಾಕರಿಸಿದ್ದಾರೆ.

ಈ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಫರೀದ್​​ ಕೋಟ್​ ಎಸ್​​​​ಪಿ ಬಾಲಕ್ರಿಶನ್​ ಸಿಂಗ್ಲಾ ಹೇಳಿದರು. ಫರೀದ್‌ಕೋಟ್‌ನಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆ 81ರಲ್ಲಿ ನಿಶಾನ್‌ನನ್ನು ಬಂಧಿಸಿದ್ದೇವೆ. ಈ ಹಿಂದೆ ಉತ್ತರಪ್ರದೇಶದಿಂದ ಪಂಜಾಬ್‌ಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ 4 ದರೋಡೆಕೋರರನ್ನು ಫರೀದ್‌ಕೋಟ್ ಪೊಲೀಸರು ಬಂಧಿಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊಹಾಲಿ ಸ್ಫೋಟ ಪ್ರಕರಣದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಸದ್ಯ ಫರೀದ್‌ಕೋಟ್ ಪೊಲೀಸರು ನಿಶಾನ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ತನಿಖೆ ಫರೀದ್‌ಕೋಟ್ ಬಾಲ್ ಕ್ರಿಶನ್ ಸಿಂಗ್ಲಾ ಹೇಳಿದ್ದಾರೆ.

ಸರ್ಕಾರ ಮತ್ತು ಪೊಲೀಸರ ಮೇಲೆ ಪ್ರಶ್ನೆ: ಬೇಹುಗಾರಿಕೆ ಇಲಾಖೆ ಕಟ್ಟಡದ ಮೇಲಿನ ದಾಳಿಯ ನಂತರ ಪಂಜಾಬ್‌ನಲ್ಲಿ ಭಯದ ವಾತಾವರಣವಿದೆ. ಮೊಹಾಲಿ ಸ್ಫೋಟ ಪ್ರಕರಣ ಸಂಭವಿಸಿ 60 ಗಂಟೆಗಳು ಕಳೆದಿವೆ. ಆದರೆ ಸರ್ಕಾರ ಮತ್ತು ಪಂಜಾಬ್ ಪೊಲೀಸರು ತನಿಖೆಗೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರ ನೀಡುತ್ತಿಲ್ಲ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನು ಓದಿ:ತೇಜಿಂದರ್ ಪಾಲ್ ಬಗ್ಗಾಗೆ ಹೈಕೋರ್ಟ್ ರಿಲೀಫ್: ಜುಲೈ 5ರವರೆಗೆ ಬಂಧಿಸದಂತೆ ತಡೆ

ABOUT THE AUTHOR

...view details