ಕರ್ನಾಟಕ

karnataka

ETV Bharat / bharat

ಆಗ್ನೇಯ ಏಷ್ಯಾ ಮೊಘಲರ ಆಕ್ರಮಣದಿಂದ ರಕ್ಷಿಸಿದ್ದು ಅಹೋಮ್ ರಾಜವಂಶ: ನಿರ್ಮಲಾ ಸೀತಾರಾಮನ್ - etv bharat karnataka

ಅಹೋಮ್ ಕಮಾಂಡರ್ ಲಚಿತ್ ಬರ್ಫುಕನ್ ಅವರ 400 ನೇ ಜನ್ಮದಿನಾಚರಣೆಯ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಹೋಮ್ ಇತಿಹಾಸವನ್ನು ಸಂರಕ್ಷಿಸಿದ್ದಕ್ಕಾಗಿ ಅಸ್ಸೋಂ ಸರ್ಕಾರವನ್ನು ಶ್ಲಾಘಿಸಿದರು.

nirmala sitaraman assam lachit barphukan
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

By

Published : Nov 23, 2022, 8:36 PM IST

ನವದೆಹಲಿ: ಮೊಘಲರ ಆಕ್ರಮಣದಿಂದ ಇಡೀ ಆಗ್ನೇಯ ಏಷ್ಯಾವನ್ನು ರಕ್ಷಿಸುವ ಶಕ್ತಿಯಂತೆ ಅಹೋಮ್ ರಾಜವಂಶವು ಕಾರ್ಯನಿರ್ವಹಿಸಿತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.

ಅಹೋಮ್ ಕಮಾಂಡರ್ ಲಚಿತ್ ಬರ್ಫುಕನ್ ಅವರ 400 ನೇ ಜನ್ಮದಿನಾಚರಣೆಯ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಅಹೋಮ್ ಇತಿಹಾಸವನ್ನು ಸಂರಕ್ಷಿಸಿದ್ದಕ್ಕಾಗಿ ಅಸ್ಸೋಂ ಸರ್ಕಾರವನ್ನು ಶ್ಲಾಘಿಸಿದರು. "ಅಸ್ಸೋಂ ಸಂಸ್ಕೃತಿ ಮತ್ತು ಅದರ ಇತಿಹಾಸವನ್ನು ಕೆತ್ತಲಾದ ಮತ್ತು ಸಂರಕ್ಷಿಸಿದ ರೀತಿಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದಕ್ಕೂ ಮೊದಲು, ಅವರು ಅಹೋಮ್ ರಾಜವಂಶ ಮತ್ತು ಲಚಿತ್ ಬರ್ಫುಕನ್ ಅವರ ಜೀವನ ಮತ್ತು ಸಾಧನೆಯನ್ನು ತೋರಿಸುವ ಪ್ರದರ್ಶನವನ್ನು ಉದ್ಘಾಟಿಸಿದರು.

ಅಸ್ಸೋಂಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು:ಇಂತಹ ವೀರರ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲು ಅವರು ಅಸ್ಸೋಂ ಸರ್ಕಾರಕ್ಕೆ ಮನವಿ ಮಾಡಿದರು." ಅಸ್ಸೋಂ ಸರ್ಕಾರವು ದೇಶಾದ್ಯಂತದ ವಿಶ್ವವಿದ್ಯಾಲಯಗಳಿಗೆ ಅಹೋಮ್ ಜನರಲ್ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು" ಎಂದು ಸೀತಾರಾಮನ್ ಹೇಳಿದರು. ಅಸ್ಸೋಂ ಇತಿಹಾಸವನ್ನು ಸಂರಕ್ಷಿಸುವಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಅಸ್ಸೋಂ ಸರ್ಕಾರದೊಂದಿಗೆ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಇತಿಹಾಸವನ್ನು ಪುನಃ ಬರೆಯುವ ಅಗತ್ಯವನ್ನು ಪುನರುಚ್ಚರಿಸಿದರು. "ಪ್ರಸ್ತುತ ಇತಿಹಾಸವು ಮೊಘಲರು ಮತ್ತು ಔರಂಗಜೇಬ್ ಬಗ್ಗೆ ಮಾತ್ರ ಮಾತನಾಡುತ್ತದೆ. ಆದರೆ ಅಹೋಮ್ ರಾಜರು ಮತ್ತು ಅವರ ಜನರಲ್‌ಗಳು ಅಸ್ಸೋಂ ಮತ್ತು ಇಡೀ ಈಶಾನ್ಯವನ್ನು ಮೊಘಲ್ ಆಕ್ರಮಣದಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು" ಎಂದು ಶರ್ಮಾ ಹೇಳಿದರು.

ಇದನ್ನೂ ಓದಿ:ಜಾಮಾ ಮಸೀದಿಗೆ ಹುಡುಗಿಯರ ಏಕಾಂಗಿ ಪ್ರವೇಶಕ್ಕೆ ನಿರ್ಬಂಧ!

For All Latest Updates

ABOUT THE AUTHOR

...view details