ತಿರುವನಂತಪುರಂ (ಕೇರಳ): ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್ಗೆ ಬಲಿಯಾಗಿ ಸುಮಾರು ಒಂದು ತಿಂಗಳ ನಂತರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಬಾವಲಿಗಳನ್ನು ಸೋಂಕಿನ ಮೂಲವೆಂದು ಭಾವಿಸಬಹುದು ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವೆ ವೀಣಾ ಜಾರ್ಜ್, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ನಡೆಸಿದ ಪರೀಕ್ಷೆಗಳು ಬಾಲಕನ ಮನೆಯ ಆವರಣದಲ್ಲಿ ಪತ್ತೆಯಾದ ಎರಡು ಜಾತಿಯ ಬಾವಲಿಗಳೊಂದಿಗೆ ವೈರಸ್ ಸಂಪರ್ಕವನ್ನು ಪತ್ತೆಹಚ್ಚಿವೆ. ಉಳಿದ ಮಾದರಿಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ 21 ದಿನಗಳಲ್ಲಿ ಯಾವುದೇ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಸೋಂಕು ಹರಡುವಿಕೆ ತಡೆಯಲು ತೆಗೆದುಕೊಂಡ ಕ್ರಮಗಳು ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.