ನೆಲ್ಲೂರು, ಆಂಧ್ರ ಪ್ರದೇಶ:ಚೋರನ ವಯಸ್ಸು ಕೇವಲ 19, ಆದರೆ ಅವನು 27 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ 21 ಪ್ರಕರಣಗಳಲ್ಲಿ ಶಿಕ್ಷೆ ಕೂಡಾ ಅನುಭವಿಸಿದ್ದಾನೆ. ಜೈಲಿಗೆ ಹೋಗಿ ಬರುವ ಈತ ಮತ್ತೆ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಾನೆ.
ಪೂರ್ವ ಗೋದಾವರಿ ಜಿಲ್ಲೆಯ ಆತ್ರೇಯಪುರಂ ಮಂಡಲದ ಅಂಕಂಪಾಲೇನಿ ಎಂಬ ಸೂರ್ಯತೇಜ ಖತರ್ನಾಕ್ ಕಳ್ಳನಾಗಿದ್ದು, ಸ್ವಂತ ಮನೆ ಹೊಂದಿದ್ದು, ಮನೆಯಲ್ಲಿ ಥಿಯೇಟರ್ ಕೂಡಾ ಹೊಂದಿದ್ದಾನೆ. ಕಷ್ಟಪಡದೇ ಜೀವನ ಸಾಗಿಸೋದಕ್ಕಾಗಿ ಕಳ್ಳತನಕ್ಕೆ ಇಳಿದಿರುವ ಈತನ ತಾಯಿ ಚಿಕ್ಕವಯಸ್ಸಿನಲ್ಲೇ ತೀರಿಕೊಂಡಿದ್ದರು.
ಇದನ್ನೂ ಓದಿ:ಅಪರೂಪದ ಸೂಪರ್ನೋವಾ ಸ್ಫೋಟ ಪತ್ತೆ ಮಾಡಿದ ಭಾರತೀಯ ಖಗೋಳಶಾಸ್ತ್ರಜ್ಞರು
ತಂದೆಯಾದವನು ಬೇರೆ ವಿವಾಹವಾದ 16ನೇ ವಯಸ್ಸಿನಲ್ಲೇ ಕಳ್ಳನಾಗಿ ಬದಲಾದ ಸೂರ್ಯತೇಜ ಮೊದಲ ಬಾರಿಗೆ ಪಲುಮಾರ್ಲು ಪೊಲೀಸರಿಗೆ ಸಿಕ್ಕಿ ಬಾಲಾಪರಾಧಿಯಾಗಿ ಜೈಲಿಗೆ ಹೋಗಿದ್ದನು. ಇದಾಗಿ ಬಿಡುಗಡೆಯಾದ ನಂತರ ಮತ್ತೆ ಕಳ್ಳತನ ಪ್ರಾರಂಭಿಸಿದ್ದನು. ಅವನ ಪ್ರಮುಖ ಕಳ್ಳತನಗಳೆಂದರೆ..
- ರಾಜಮಂಡ್ರಿಯ ಪ್ರಕಾಶ್ ನಗರದ ಅಂಗಡಿಯಲ್ಲಿ 3 ಸಾವಿರ ರೂಪಾಯಿ ಚಿಲ್ಲರೆ ಹಣ
- ಕಾರು ಅಪಹರಣ ಮಾಡಿ, ಏಲೂರಿಗೆ ಪ್ರಯಾಣ, ಅಲ್ಲಿ ಮತ್ತೊಂದು ಕಾರು ಕಳ್ಳತನ, 10 ಸಾವಿರ ದರೋಡೆ
- ವಿಜಯವಾಡಕ್ಕೆ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿ ಅಮರಾವತಿಗೆ ಪ್ರಯಾಣ
- ನಂತರ ಸಿನಿಮಾ ಹಾಲ್ನಲ್ಲಿ ಸ್ಯಾಟಲೈಟ್ ಪ್ರೊಜೆಕ್ಟರ್ ಕಳ್ಳತನ
- ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಗೆ ಬರುವ ವೇಳೆ ವೆಲ್ಡಿಂಗ್ ಸಾಮಗ್ರಿಗಳ ಕಳ್ಳತನ
- ಇದಾದ ನಂತರ ಮತ್ತೊಂದು ವೆಲ್ಡಿಂಗ್ ಶಾಪ್ನಲ್ಲಿ ಆಕ್ಸಿಜನ್ ಸಿಲಿಂಡರ್ ಕಳ್ಳತನ